ನ್ಯೂಸ್ ನಾಟೌಟ್ : ಸುಳ್ಯದ ಜಾಲ್ಸೂರಿನಲ್ಲಿರುವ ಪ್ರಸಿದ್ಧ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನ ಹಾಗೂ ವರ್ಷಾವಧಿ ಜಾತ್ರೋತ್ಸವವು ಅದ್ದೂರಿಯಿಂದ ಜರುಗಲಿದೆ. ಫೆ.18ರಿಂದ ಫೆ.20ರವರೆಗೆ ನಡೆಯಲಿರುವ ಈ ಜಾತ್ರೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾಗಲಿದ್ದಾರೆ.
ಈ ಪ್ರಯುಕ್ತ ಫೆ.12ರಂದು ಸೋಮವಾರ ಬೆಳಗ್ಗೆ 8.30ಕ್ಕೆ ಮೂಹೂರ್ತದ ಗೊನೆ ಕಡಿಯುವ ಕಾರ್ಯಕ್ರಮವಿರಲಿದೆ.
ಫೆ.18ಕ್ಕೆ ಬೆಳಗ್ಗೆ 8ರಿಂದ ಭಜನೆ ಕಾರ್ಯಕ್ರಮ ಆರಂಭವಾಗಲಿದ್ದು, 10.30ರಿಂದ ಹಸಿರುವಾಣಿ ಸಮರ್ಪಣೆ ಜರುಗಲಿದೆ. 11.30ಕ್ಕೆ ಉಗ್ರಾಣ ತುಂಬಿಸುವ ಕಾರ್ಯಕ್ರಮ ಇರಲಿದ್ದು, 12.30ಕ್ಕೆ ದೇವರಿಗೆ ಮಹಾಪೂಜೆ,ಪ್ರಸಾದ ವಿತರಣೆ ಸೇರಿದಂತೆ ಅನ್ನಸಂತರ್ಪಣೆ ಇರಲಿದೆ.ರಾತ್ರಿ 7ಕ್ಕೆ ದೇವರಿಗೆ ಮಹಾಪೂಜೆ,7.30ರಿಂದ 8ಗಂಟೆ ತನಕ ವಿವೇಕಾನಂದ ವಿದ್ಯಾಸಂಸ್ಥೆ, ವಿನೋಬಾನಗರ ಮಕ್ಕಳಿಂದ ‘ತುಳುನಾಡು ವೈಭವ’ ನಡೆಯಲಿದೆ. ಇನ್ನು ರಾತ್ರಿ 8ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶಾಸ್ತ್ರೀಯ ನೃತ್ಯ ವೈಭವ ಇರಲಿದೆ.
ಫೆ.19ಕ್ಕೆ ಬೆಳಗ್ಗೆ 9ರಿಂದ ಗಣಪತಿ ಹವನ,ಸುಬ್ರಹ್ಮಣ್ಯ ಹವನದ ಸಂಕಲ್ಪ,ದೇವರಿಗೆ ನವಕ ಕಲಶಾಭಿಷೇಕ,ಪರಿವಾರ ದೇವರಿಗೆ ತಂಬಿಲ ನಡೆಯಲಿದೆ.ಮಧ್ಯಾಹ್ನ 12ರಿಂದ ಸುಬ್ರಹ್ಮಣ್ಯ ಹವನದ ಪೂರ್ಣಾಹುತಿ , 12.30ರಿಂದ ದೇವರಿಗೆ ಮಹಾಪೂಜೆ,ಪಲ್ಲಪೂಜೆ ಹಾಗೂ 1 ಗಂಟೆಗೆ ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 6 ಗಂಟೆಗೆ ದೀಪಾರಾಧನೆ,6.30ರಿಂದ ತಾಯಂಬಕ ಹಾಗೂ ಸಂಜೆ 7 ಗಂಟೆಗೆ ಮಹಾಪೂಜೆ,ದೇವರ ಉತ್ಸವ ಬಲಿ,ಪಟ್ಟಣ ಸವಾರಿ, ನೃತ್ಯ ಬಲಿ, ವಸಂತ ಕಟ್ಟೆ ಪೂಜೆ,ಬಡಿ ಉತ್ಸವ ಹಾಗೂ ಅನ್ನ ಸಂತರ್ಪಣೆ ನೆರವೇರಲಿದೆ.
ಬೆಳಗ್ಗೆ 10ರಿಂದ ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ,ರಾಜಾಂಗಣ ಪ್ರಸಾದ,ಮಹಾಪೂಜೆ,ಸಂಪ್ರೋಕ್ಷಣೆ,ಮಂತ್ರಾಕ್ಷತೆ ಹಾಗೂ ಅನ್ನಸಂತರ್ಪಣೆ ಇರಲಿದೆ. ಬಳಿಕ 6.30ರಿಂದ ರಂಗಪೂಜೆ ಹಾಗೂ ರಾತ್ರಿ 7ಕ್ಕೆ ದೇವರ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ಇರಲಿದೆ.ರಾತ್ರಿ 7.30ರಿಂದ ಬೊಳ್ಳಿಮಲೆತ ಶಿವಶಕ್ತಿಲು ತುಳು ಪೌರಾಣಿಕ ನಾಟಕ ನಡೆಯಲಿದೆ.
ಮೂರು ದಿನಗಳ ಕಾಲ ನಡೆಯಲಿರುವ ಈ ವೈಭವದ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಜೀರ್ಣೋದ್ಧಾರ ಸಮಿತಿ, ಉತ್ಸವ ಸಮಿತಿ,ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.