ಕರಾವಳಿ

ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್​ಗೆ ಕಾರು ಡಿಕ್ಕಿ..!,ಪೂಜೆ ಮುಗಿಸಿಕೊಂಡು ಬರುತ್ತಿದ್ದ ವೇಳೆ ಅವಘಡ

ನ್ಯೂಸ್ ನಾಟೌಟ್ : ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ (BJP MLA Rajesh Naik) ಅವರಿಗೆ ಕಾರೊಂದು ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿ ಸ್ಥಳೀಯರ ನೆರವಿನಿಂದ ಸಿಕ್ಕಿಬಿದ್ದಿರುವ ಘಟನೆ ಬಗ್ಗೆ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ತೆಂಕ ಎಡಪದವು ಬಳಿ ಈ ಘಟನೆ ನಡೆದಿದ್ದು, ಶಾಸಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.

ಶಾಸಕರು (ಜನವರಿ 14) ಎಡಪದವು ಗೋಪಾಲಕೃಷ್ಣ ದೇವಸ್ಥಾನಕ್ಕೆಂದು ತೆರಳಿದ್ದರು.ಪೂಜೆ ಮುಗಿಸಿ ಹಿಂದಿರುಗುತ್ತಿದ್ದಾಗ ರಾಜೇಶ್ ನಾಯ್ಕ್​ ಅವರಿಗೆ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜೇಶ್ ನಾಯ್ಕ್​ಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಮೂಡಬಿದ್ರೆ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕಾರು ಗುದ್ದಿದ ರಭಸಕ್ಕೆ ಶಾಸಕ ರಾಜೇಶ್ ನಾಯ್ಕ್ ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.

ರಾಜೇಶ್ ನಾಯ್ಕ್​ ಕಾರಿಗೆ ಡಿಕ್ಕಿ ಹೊಡೆದ ಬಳಿಕ ಎಸ್ಕೇಪ್ ಆಗುತ್ತಿದ್ದ ಸ್ವಿಫ್ಟ್ ಕಾರನ್ನು ಸ್ಥಳೀಯರು ಗುರುಪುರದಲ್ಲಿ ಅಡ್ಡಗಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಬಜ್ಪೆ ಪೊಲೀಸರು, ಚಾಲಕನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ರಾಜೇಶ್ ನಾಯ್ಕ್​ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ವಾಪಸ್ ಆಗಿದ್ದಾರೆ.

Related posts

ಜ್ಯುವೆಲ್ಲರಿಗೆ ನುಗ್ಗಿ ಸಿಬ್ಬಂದಿಯ ಕೊಲೆ ಕೇಸ್,ಒಂದು ತಿಂಗಳ ಬಳಿಕ ಆರೋಪಿ ಅಂದರ್

ಕಲ್ಲುಗುಂಡಿ: ಮನೆಮಂದಿ ಆಸ್ಪತ್ರೆಗೆಂದು ತೆರಳಿದ್ದ ವೇಳೆ ಹಾಡಹಗಲೇ ಮನೆಯೊಳಗೆ ನುಗ್ಗಿದ ಖದೀಮರು..!,ನಗದು,ಚಿನ್ನ ಸೇರಿದಂತೆ ಬೆಳ್ಳಿಯನ್ನೂ ಕದ್ದೊಯ್ದು ಕಳ್ಳರು ಎಸ್ಕೇಪ್..!

ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಿಂದ ಕಾನೂನು ಮಾಹಿತಿ ಕಾರ್ಯಗಾರ