ಕರಾವಳಿಸುಳ್ಯ

ಸುಳ್ಯ: ಭೀಕರ ರಸ್ತೆ ಅಪಘಾತ;ಕಾರು-ಬೈಕ್ ಡಿಕ್ಕಿ,ಪಲ್ಟಿ ಹೊಡೆದ ಕಾರು..!ಮೂವರಿಗೆ ಗಂಭೀರ ಗಾಯ,ಮಾನವೀಯತೆ ಮೆರೆದ ಜನ..!

ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು,ಇಂದು ಅರಂಬೂರು ಎಂಬಲ್ಲಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ವರದಿಯಾಗಿದೆ.ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು,ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿರುವ ರಭಸಕ್ಕೆ ಕಾರು ಪಲ್ಟಿ ಹೊಡೆದಿದೆ ಎನ್ನಲಾಗಿದೆ.ಅಪಘಾತವಾದ ಸ್ಥಳಕ್ಕೆ ಕೂಡಲೇ ಹತ್ತಾರು ಜನ ಜಮಾಯಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಪೆರಾಜೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ತಾಜುದ್ದೀನ್ ಮತ್ತು ಜಸೀರ್ ಎಂಬವರು ಗಾಯಾಳುಗಳನ್ನು ಸುಳ್ಯ ಸರಕಾರಿ ಅಸ್ಪತ್ರೆಗೆ ಕರೆ ತಂದಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಕಾರು ಚಾಲಕನಿಗೂ ಗಾಯಗಳಾಗಿದ್ದು, ಸುಳ್ಯದ ಅಂಬ್ಯುಲೆನ್ಸ್ ಚಾಲಕ ಸಿದ್ದಿಕ್ ಎನ್ನುವವರು ಅಸ್ಪತ್ರೆಗೆ ಕರೆ ತಂದಿದ್ದಾರೆ.ಸ್ಥಳೀಯರ ಈ ಮಾನವೀಯ ಗುಣಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

Related posts

Kodagu:ಕೊಡಗಿನಲ್ಲಿ ಮುಂದುವರಿದ ವರುಣನ ಆರ್ಭಟ,ನಾಳೆ(ಜುಲೈ ೦7) ಅಂಗನವಾಡಿ,ಶಾಲಾ-ಕಾಲೇಜ್ ಗಳಿಗೆ ರಜೆ ಘೋಷಣೆ

ಹೆಡ್​ ಕಾನ್ಸ್​ಟೇಬಲ್ ​ನಿಂದಲೇ ಇಲಾಖೆಯ ಗೌಪ್ಯ ಮಾಹಿತಿ ಸೋರಿಕೆ..! ಹಣ ಕೊಟ್ರೆ ಕೇಸ್ ಸಂಬಂಧಪಟ್ಟ ಮೊಬೈಲ್ ನಂಬರ್​, ಟವರ್ ಲೊಕೇಶನ್ ಎಲ್ಲ ಸಿಗುತ್ತೆ..!

ಆಗುಂಬೆ: 30 ಅಡಿ ಪ್ರಪಾತಕ್ಕೆ ಬಿದ್ದ ಮುಸ್ಲಿಂ ವ್ಯಾಪಾರಿಯನ್ನು ರಕ್ಷಿಸಿದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು..!, ಆಗುಂಬೆ ಘಾಟಿ 7ನೇ ತಿರುವಿನಲ್ಲಿ ಆಗಿದ್ದೇನು..?