ದೇಶ-ಪ್ರಪಂಚ

ಲೋಕಸಭೆ ಚುನಾವಣೆಗೆ ಬಾಲಿವುಡ್‌ ನಟಿ ಕಂಗನಾ ರಣಾವತ್ ಸ್ಪರ್ಧಿಸುತ್ತಿದ್ದರಾ? ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಈ ಬಗ್ಗೆ ನಟಿಯ ತಂದೆ ಹೇಳಿದ್ದೇನು?

ನ್ಯೂಸ್ ನಾಟೌಟ್ :ಈ ಹಿಂದೆ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು.ಇದೀಗ ಮತ್ತೊಬ್ಬರು ಖ್ಯಾತ ನಟಿ ಸ್ಪರ್ಧಿಸಲಿದ್ದಾರೆ ಎನ್ನುವ ಬಗ್ಗೆ ಮಾತುಗಳು ಹರಿದಾಡುತ್ತಿವೆ.ಹೌದು, ಬಾಲಿವುಡ್‌ ನ ಹೆಸರಾಂತ ನಟಿ ಕಂಗನಾ ರಣಾವತ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.

ಈ ಹಿಂದೆಯೇ ಚಿತ್ರರಂಗದ ಹಲವು ನಟ ನಟಿಯರು ರಾಜಕೀಯಕ್ಕೆ ಪ್ರವೇಶಿಸಿ ಸೋಲು ಗೆಲುವುಗಳನ್ನು ಕಂಡಿದ್ದಾರೆ.ಇದೀಗ ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಈ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡದಿದ್ದರೂ ಸ್ವತಃ ಕಂಗನಾ ಅವರ ತಂದೆ ಅಮರ್​ದೀಪ್​ ಅವರೇ ಖಚಿತಪಡಿಸಿದ್ದಾರೆ.

ನಟಿ ಕಂಗನಾ ರಣಾವತ್ ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದರು.ಮುಖ್ಯವಾಗಿ ಮಹಿಳೆಯರ ಪರ ಹಲವಾರು ಸಂದರ್ಭಗಳಲ್ಲಿ ಮಾತನಾಡಿದ್ದೂ ಇದೆ. ತಮ್ಮ ತೀಕ್ಷ್ಣ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ಅದು ರಾಜಕೀಯ ಅಥವಾ ಸಾಮಾಜಿಕವಾಗಿರಲಿ ಪ್ರತಿ ವಿಷಯದಲ್ಲೂ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಕಂಗನಾಗೆ ರಾಜಕೀಯ ಪ್ರವೇಶದ ಬಗ್ಗೆ ಪದೇ ಪದೇ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಇಲ್ಲಿಯವರೆಗೂ ಆಕೆ ಅದನ್ನು ನಿರಾಕರಿಸುತ್ತಲೇ ಬಂದಿದ್ದಾರೆ.ಆದರೆ, ಈ ಬಾರಿ ಅವರು ಸಕಾರಾತ್ಮಕ ಪ್ರತಿಕ್ರಿಯೆ ಕೇಳಿ ಬಂದಿದೆ.

ಈ ಕುರಿತು ಮಾತನಾಡಿರುವ ಅಮರ್​ದೀಪ್​ ರಣಾವತ್, ಮಗಳು 2024 ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು. ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದನ್ನು ಹೇಳಿರಲಿಲ್ಲ.ಈ ಕುರಿತಂತೆ ನಡ್ಡಾ ಜೊತೆ ಕಂಗನಾ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ತಿಳಿಯಲಿದೆ ಎಂದು ಕಂಗನಾ ತಂದೆ ಅಮರ್​ದೀಪ್​ ತಿಳಿಸಿದ್ದಾರೆ.

ಈ ಹಿಂದೆ ದ್ವಾರಕಾಗೆ ಭೇಟಿ ನೀಡಿದ್ದ ನಟಿ ಕಂಗನಾ ಶ್ರೀಕೃಷ್ಣ ಆಶೀರ್ವದಿಸಿದರೆ ಎಲೆಕ್ಷನ್​ನಲ್ಲಿ ಸ್ಪರ್ಧಿಸುವುದಾಗಿ ಪರೋಕ್ಷವಾಗಿ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಸುಳಿವು ನೀಡಿದ್ದರು. ಬಿಜೆಪಿ ಸರ್ಕಾರದ ಸತತ ಪ್ರಯತ್ನದಿಂದಾಗಿ 600 ವರ್ಷಗಳ ಹೋರಾಟದ ಬಳಿಕ, ಭಾರತೀಯರಾದ ನಾವುಗಳು ಈ ದಿನವನ್ನು ಎದುರು ನೋಡುತ್ತಿದ್ದೇವೆ. ವಿಜೃಂಭಣೆಯಿಂದ ನಾವು ಅಲ್ಲಿ ದೇವಸ್ಥಾನವನ್ನು ಸ್ಥಾಪಿಸುತ್ತಿದ್ದೇವೆ. ಸನಾತನ ಧರ್ಮದ ಧ್ವಜವು ಪ್ರಪಂಚದಾದ್ಯಂತ ಹಾರಿಸಬೇಕು ಎಂದು ನಟಿ ಹೇಳಿದ್ದರು.

Related posts

ಭಾರತೀಯರಿದ್ದ ವಿಮಾನವನ್ನು ಫ್ರಾನ್ಸ್ ತಡೆದದ್ದೇಕೆ..? ಅಪಹರಣಕ್ಕೊಳಗಾಗಿದ್ದರಾ ಭಾರತೀಯರು..? ಈ ಬಗ್ಗೆ ಪ್ರಾನ್ಸ್ ಹೇಳಿದ್ದೇನು?

ಮೆಗ್ಗಾನ್ ಜಿಲ್ಲಾಸ್ಪತ್ರೆ ಸಿಬ್ಬಂದಿಯ ಮಹಾಯಡವಟ್ಟು..!ಸಬೀನಾ, ಕಾವ್ಯಾಳ ಮಗು ಅದಲು-ಬದಲು..!,ಮುಂದೆ ಏನಾಯ್ತು?

ಉತ್ತಮ ಕೆಲಸ ಮಾಡುವವರಿಗೆ ಅರ್ಹವಾದ ಗೌರವ ಸಿಗಲ್ಲ, ಕೆಟ್ಟ ಕೆಲಸ ಮಾಡುವವರಿಗೆ ಎಂದಿಗೂ ಶಿಕ್ಷೆಯಾಗುವುದಿಲ್ಲ: ನಿತಿನ್ ಗಡ್ಕರಿ ಬೇಸರ