ಜೀವನಶೈಲಿ

ಬೃಹತ್ ಹೆಬ್ಬಾವನ್ನೇ ಹಿಡಿದು ಆಟವಾಡಿದ ಮಹಿಳೆ..! ಮಹಿಳೆಯ ಈ ಸಾಹಸದ ವಿಡಿಯೋ ಕಂಡು ನೆಟ್ಟಿಗರೇ ಶಾಕ್..!

ನ್ಯೂಸ್ ನಾಟೌಟ್ :ಇತ್ತೀಚೆಗಷ್ಟೇ ಉಡುಪಿಯಲ್ಲಿ ಸಣ್ಣ ಬಾಲಕನೋರ್ವ ಬೃಹತ್ ಹೆಬ್ಬಾವನ್ನು ಹಿಡಿದು ಭಾರಿ ಸುದ್ದಿಯಾಗಿದ್ದ.ಇದೀಗ ಮಹಿಳೆಯೊಬ್ಬಳು ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿದು ಸುದ್ದಿಯಾಗಿದ್ದಾಳೆ.ಈ ವಿಡಿಯೋ ವೀಕ್ಷಿಸಿದವರು ಅಬ್ಬಬ್ಬಾ..! ಈ ಮಹಿಳೆಯ ಡೇರಿಂಗ್ ಮೆಚ್ಚಲೇ ಬೇಕು ಎನ್ನುತ್ತಿದ್ದಾರೆ.

ಹೌದು… ಹೆಬ್ಬಾವು ಕಂಡ್ರೆ ಯಾರಿಗೆ ಭಯವಿಲ್ಲ ಹೇಳಿ. ದೈತ್ಯ ಹೆಬ್ಬಾವು ಒಮ್ಮೆ ದಾಳಿ ಮಾಡಿ ಸುತ್ತಾಕಿಕೊಂಡರೆ ಅದರ ಬಾಹುಬಲದಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅದು ಸುತ್ತಿಕೊಳ್ಳುವ ಪ್ರಾಣಿ ಅಥವಾ ಮನುಷ್ಯನ ಎಲುಬುಗಳು ಮುರಿದು ಪುಡಿ ಪುಡಿಯಾಗುತ್ತವೆ. ಅಷ್ಟು ಭಯಾನಕ ಈ ಹೆಬ್ಬಾವು.ಆದರೆ ಈ ಹೆಬ್ಬಾವನ್ನು ಹಿಡಿಯುವುದು ಕೂಡ ಅಷ್ಟೇ ನಾಜೂಕಾಗಿರುತ್ತೆ.ಸ್ವಲ್ಪ ಯಾಮಾರಿದ್ರೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ಹೀಗೆ ದೈತ್ಯ ಹೆಬ್ಬಾವನ್ನೇ ಮಹಿಳೆಯೊಬ್ಬರು ಬರಿ ಕೈಯಲ್ಲಿ ಹಿಡಿದು ಅಟವಾಡಿರುವ ವಿಡಿಯೋ ಒಂದು ಸೋಷಿಯ್‌ ಮೀಡಿಯಾದಲ್ಲಿ ಗಮನಸೆಳೆಯುತ್ತಿದೆ.

@shital_kasar_official_ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊ ಕ್ಲಿಪ್, ಮಹಿಳೆಯ ಧೈರ್ಯಕ್ಕೆ ಸಾಕ್ಷಿಯಾಗಿದೆ. ಈ ವಿಡಿಯೋಗೆ 3,000 ಕ್ಕೂ ಹೆಚ್ಚು ಲೈಕ್‌ಗಳನ್ನು ಬಂದಿವೆ. ಜೀವ ಭಯವನ್ನು ಲೆಕ್ಕಿಸದೇ ಹೆಬ್ಬಾವನ್ನು ಸಾಕುಪ್ರಾಣಿಯಂತೆ ಆಟವಾಡಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಧೈರ್ಯಶಾಲಿ ಮಹಿಳೆ ಅಂತ ಕೆಲವೊಂದಿಷ್ಟು ಜನ ಹೇಳಿದ್ರೆ, ಇನ್ನೂ ಕೆಲವರು, ಹುಚ್ಚಾಟ ಸರಿಯಲ್ಲ ಅಂತ ಬುದ್ದಿವಾದ ಹೇಳಿದ್ದಾರೆ.ಒಟ್ಟಿನಲ್ಲಿ ಈ ಮಹಿಳೆಯ ಧೈರ್ಯವನ್ನು ಮೆಚ್ಚಲೇ ಬೇಕು.

https://www.instagram.com/reel/Czz5eARo97X/?utm_source=ig_embed&ig_rid=1d3ca0a7-a49f-4da0-9f37-959e2c943aba

https://www.instagram.com/reel/Czz5eARo97X/?utm_source=ig_embed&ig_rid=1d3ca0a7-a49f-4da0-9f37-959e2c943aba

Related posts

ಎಲ್ ಪಿ ಜಿ ಗ್ಯಾಸ್ , ವಿದ್ಯುತ್ ಇದ್ಯಾವುದು ಬೇಡ, ಖರ್ಚಿಲ್ಲದೇ ಅಡುಗೆ ತಯಾರಿಸಲು ಬಂದಿದೆ ಸ್ಟವ್,  ಅಡುಗೆಯ ರುಚಿಯೇ ಅದ್ಭುತ

India Post GDS Recruitment : 30,041 ಗ್ರಾಮೀಣ ಅಂಚೆ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಿ, ಇಂದು ಕೊನೇ ದಿನ

ಚಳಿಗಾಲದಲ್ಲೂ ಚರ್ಮ ಕಾಂತಿಯುತವಾಗಿರಲು ಇವುಗಳನ್ನು ಕುಡಿಯಿರಿ…