ನ್ಯೂಸ್ ನಾಟೌಟ್: ಶ್ರದ್ಧೆ, ಭಕ್ತಿ ಇದ್ದರೆ ಸಾಕು ಎಲ್ಲ ಧರ್ಮದಲ್ಲೂ ದೇವರನ್ನು ಕಾಣಬಹುದು. ಈ ಮಾತಿಗೆ ಸುಳ್ಯದ ಮುಸ್ಲಿಂ ಮಹಿಳೆಯೊಬ್ಬರು ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ.
ಮುಸ್ಲಿಂ ಧರ್ಮೀಯರೂ ಕೂಡ ಹಿಂದೂ ಧರ್ಮದ ಆಚರಣೆಗಳನ್ನು ಒಪ್ಪಿಕೊಂಡು ಹಿಂದೂ ದೇವಾಲಯಗಳಲ್ಲಿ, ದೈವಗಳಿಗೆ ಹರಕೆ ಸಲ್ಲಿಸಿರುವ ಘಟನೆ ಇದು ಮೊದಲೇನಲ್ಲ. ಈ ಹಿಂದೆಯೂ ಇಂತಹ ಅನೇಕ ಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಈ ಸಾಲಿಗೆ ಮತ್ತೊಂದು ಘಟನೆ ಕೂಡ ಸಾಕ್ಷಿಯಾಗಿರುವುದು ವಿಶೇಷ.
ಅಂದ ಹಾಗೆ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿರುವುದು ಸುಳ್ಯದ ಕಮಿಲಡ್ಕ ದುರ್ಗಾದೇವಿ ಮಂದಿರ ಮತ್ತು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವದ ಸಮಯದಲ್ಲಿ ನೂರಾರು ಭಕ್ತರು ತುಲಾ ಭಾರ ಸೇವೆಯನ್ನು ದೇವಿಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಮುಸ್ಲಿಂ ಮಹಿಳೆ ಕೂಡ ತುಲಾಭಾರ ಸೇವೆ ಸಲ್ಲಿಸಿ ತನ್ನ ಮನದಲ್ಲಿದ್ದ ಸಂಕಲ್ಪವನ್ನು ಈಡೇರಿಸಿ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಪ್ರಸಾದವನ್ನು ಸ್ವೀಕರಿಸಿದ್ದಾರೆ.