ನ್ಯೂಸ್ ನಾಟೌಟ್ : ಈ ದೇವಾಸ್ಥಾನ ಉದ್ಘಾಟನೆಗೆ ಸಜ್ಜುಗೊಳಿಸಲು ಬರೋಬ್ಬರಿ 12 ವರ್ಷಗಳನ್ನೇ ತೆಗೆದುಕೊಳ್ಳಲಾಯಿತು. ಬರೋಬ್ಬರಿ12,500ಕ್ಕೂ ಹೆಚ್ಚು ಸ್ವಯಂಸೇವಕರು ಸೇರಿ ನಿರ್ಮಿಸಿರುವ ವಿಶ್ವದ ಅತೀ ದೊಡ್ಡ ಹಿಂದೂಗಳ ಪವಿತ್ರ ದೇವಾಲವಿದು..!
ಹೌದು, ಕೊನೆಗೂ ಈ ದೇವಾಲಯ ಉದ್ಘಾಟನೆಗೆ ಸಿದ್ಧವಾಗಿದೆ.ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲಿಯೇ ಇದರ ಉದ್ಘಾಟನೆಯು ನೆರವೇರಲಿದೆ.ಅಂದ ಹಾಗೆ ಈ ದೇವಸ್ಥಾನ ಇರೋದು ಅಮೇರಿಕಾದಲ್ಲಿ .ನ್ಯೂಜೆರ್ಸಿಯು ಭಾರತದ ಹೊರಗಿನ ಆಧುನಿಕ ಯುಗದ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾದ BAPS ಸ್ವಾಮಿನಾರಾಯಣ ಅಕ್ಷರಧಾಮವನ್ನು ಅಕ್ಟೋಬರ್ 08ರಂದು ಉದ್ಘಾಟಿಸಲು ಸಜ್ಜಾಗಿದೆ.
BAPS ಆಧ್ಯಾತ್ಮಿಕ ಮುಖ್ಯಸ್ಥ ಮಹಂತ್ ಸ್ವಾಮಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಅಕ್ಟೋಬರ್ 8 ರಂದು ಅಕ್ಷರಧಾಮವನ್ನು ಔಪಚಾರಿಕವಾಗಿ ಉದ್ಘಾಟಿಸಲಾಗುವುದು ಎಂಬ ಮಾಹಿತಿಯಿದೆ.ಅಕ್ಟೋಬರ್ 18 ರಿಂದ ಈ ವಿಶಾಲ ದೇವಾಲಯವು ಪ್ರವಾಸಿಗರಿಗಾಗಿ ತೆರೆದಿರುತ್ತದೆ. ಈ ದಿವ್ಯ ದೇಗುಲವನ್ನು ನೋಡೋದಕ್ಕೆ ಎರಡು ಕಣ್ಣುಗಳೇ ಸಾಲದಾಗಿದೆ.ಈ ಸುಂದರ ದೇವಾಲಯದ ವಿಹಂಗಮ ನೋಟವನ್ನು ಒಂದು ಕ್ಷಣ ನೋಡಿದ್ರೆ ಕಣ್ಣುಗಳೇ ಪಾವನವಾಗುತ್ತವೆ. ಸದ್ಯ ಈ ದೇಗುಲದ ವಿಡಿಯೋಗಳು ಯೂಟ್ಯೂಬ್ ಗಳಲ್ಲಿ ಲಭ್ಯವಿದ್ದು,ಅಕ್ಟೋಬರ್ 18 ರಿಂದ ಪ್ರವಾಸಿಗರು ಈ ದೇಗುಲವನ್ನು ವೀಕ್ಷಿಸಬಹುದಾಗಿದೆ.
ಈ ದೇವಾಲಯವು 183 ಎಕರೆಗಳಷ್ಟು ವಿಸ್ತಾರವಾಗಿದೆ ಅಂದ್ರೆ ನೀವು ನಂಬಲೇ ಬೇಕು.ಅಂದ್ರೆ ಒಮ್ಮೆ ಇಲ್ಲಿಗೆ ಪ್ರವೇಶ ಮಾಡಿದ್ರೆ ಈ ದೇವಾಲಯವನ್ನು ಕಂಪ್ಲೀಟ್ ವೀಕ್ಷಣೆ ಮಾಡಿ ಬರಲು ಎಷ್ಟು ಸಮಯ ಬೇಕಾಗಬಹುದು ನೀವೇ ಅಂದಾಜಿಸಿ..! ಈ ದೇವಾಲಯವು 255 ಅಡಿ ಉದ್ದ, 345 ಅಡಿ ಅಗಲ ಮತ್ತು 191 ಅಡಿಗಳಷ್ಟು ಎತ್ತರವಾಗಿದೆ.
ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವು ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆ ಟೌನ್‌ಶಿಪ್‌ನಲ್ಲಿದ್ದು, ಇದು ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನ ದಕ್ಷಿಣಕ್ಕೆ ಸುಮಾರು 90 ಕಿಲೋಮೀಟರ್‌ಗಳು ಮತ್ತು ವಾಷಿಂಗ್ಟನ್, ಡಿಸಿಯಿಂದ ಉತ್ತರಕ್ಕೆ 289 ಕಿಲೋಮೀಟರ್ ದೂರದಲ್ಲಿದೆ.
ನ್ಯೂಜೆರ್ಸಿಯಲ್ಲಿರುವ ಅಕ್ಷರಧಾಮ ದೇವಾಲಯ ಪ್ರಾಚೀನ ಹಿಂದೂ ಧರ್ಮಗ್ರಂಥಗಳು ಮತ್ತು ಸಂಸ್ಕೃತಿಗೆ ಅನುಗುಣವಾಗಿಯೇ ಸಂಕೀರ್ಣವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಬರೋಬ್ಬರಿ 10,000 ಪ್ರತಿಮೆಗಳನ್ನು ಒಳಗೊಂಡಿದೆ. ಗಮನಾರ್ಹವಾಗಿ ಇದನ್ನು ಯುನೈಟೆಡ್ ಸ್ಟೇಟ್ಸ್ ನಲ್ಲಿ ಹಿಂದೂ ಕಲಾತ್ಮಕತೆ ಮತ್ತು ವಾಸ್ತುಶಿಲ್ಪದ ಪ್ರದರ್ಶನವೆಂದು ಪರಿಗಣಿಸಲಾಗಿದೆ.