ಶಿಕ್ಷಣಸುಳ್ಯ

ಸುಳ್ಯ: ಸೈಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ, ವಿದ್ಯಾರ್ಥಿಗಳ ಪೋಷಕರು, ಹಿರಿಯ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಸನ್ಮಾನ

ನ್ಯೂಸ್ ನಾಟೌಟ್ ಸುಳ್ಯ ಸಂತ ಜೋಸೆಫ್ ಶಾಲೆಯಲ್ಲಿ ಪೋಷಕರ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶಿಕ್ಷಕರ ದಿನ ಆಚರಿಸಲಾಯಿತು.

ಈ ಸಂದರ್ಭ ಶಿಕ್ಷಕರಿಗೆ , ಆಡಳಿತ ಮಂಡಳಿಯವರಿಗೆ, ಭೋದಕೇತರ ಸಿಬ್ಬಂದಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು . ನಂತರ ಶಾಲಾ ಎಲ್ಲಾ ಶಿಕ್ಷಕರನ್ನು, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಶಾಲಾ ಸಂಚಾಲಕ ಫಾ. ವಿಕ್ಟರ್ ಡಿಸೋಜ ಮತ್ತು ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮ ಸನ್ಮಾನಕ್ಕೆ ಕೃತಜ್ಞತೆ ಅರ್ಪಿಸಿದರು. ಗುರುಸ್ವಾಮಿ, ಗುರುಪ್ರಸಾದ ರೈ, ಧನ್ಯ, ಉಷಾ, ಶಿವಕುಮಾರ್, ಶೋಭಿತಾ, ವತ್ಸಲಾ, ವಿದ್ಯಾ, ಉದಯ, ಜೆನೆಟ್, ವನಿತಾ, ಸಲಾಮ್, ಪ್ರೇಮ, ಅಕ್ಷತಾ, ಖಾದರ್ ಹಿರಿಯ ವಿದ್ಯಾರ್ಥಿ ಸಂಘದ ಆದರ್ಶ್, ನಿಹಾಲ್ ಮತ್ತಿತರರು ಉಪಸ್ಥಿತರಿದ್ದರು. ಪೋಷಕರ ಸಂಘದ ಅಧ್ಯಕ್ಷ ಜೆ.ಕೆ. ರೈ ಅಧ್ಯಕ್ಷತೆ ವಹಿಸಿದ್ದರು. ಗುರುಸ್ವಾಮಿ ಸ್ವಾಗತಿಸಿ, ಗುರುಪ್ರಸಾದ್ ರೈ ವಂದಿಸಿದರು. ಉಷಾ ಮತ್ತು ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

Related posts

ಸುಳ್ಯ : ಕಲ್ಕಿ ಮೊಬೈಲ್‌ನಲ್ಲಿ ಕೊನೆಯ ಲಕ್ಕಿ ಕೂಪನ್ ಡ್ರಾ, ಯಾರ ಪಾಲಾಯಿತು ಸ್ಮಾರ್ಟ್ ವಾಚ್..?

ಗುತ್ತಿಗಾರು:ಸ್ಕೂಟಿ ಮತ್ತು ಬಸ್ ಮಧ್ಯೆ ಭೀಕರ ಅಪಘಾತ: ಬೈಕ್‌ ಸವಾರ ಮೃತ್ಯು,ಬಾಲಕಿಗೆ ಗಂಭೀರ ಗಾಯ

‘ಉದ್ಯೋಗಿಗಳ ಮೇಲೆ ನಾವು ದಬ್ಬಾಳಿಕೆ ಮಾಡಿಲ್ಲ’ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ ಚಿದಾನಂದ ಸ್ಪಷ್ಟನೆ