ನ್ಯೂಸ್ ನಾಟೌಟ್ : ಇಂದು ರಕ್ಷಾಬಂಧನದ ಸಂಭ್ರಮ.ಸಹೋದರ-ಸಹೋದರಿಯರು ಆಚರಿಸುವ ಹಬ್ಬ.ತಂಗಿಯು ತನ್ನ ಅಣ್ಣನಿಗೆ ರಾಖಿ ಕಟ್ಟಿ ರಕ್ಷಣೆ ಕೇಳುತ್ತಾಳೆ. ಸಹೋದರ ರಕ್ಷಿಸುವ ಭರವಸೆ ನೀಡುತ್ತಾನೆ. ತಂಗಿಗೆ ಉಡುಗೊರೆ ನೀಡಿ ಜೊತೆಗೆ ನಾವಿದ್ದೇನೆ ಅನ್ನುವ ಮನೋಧೈರ್ಯ ತುಂಬುತ್ತಾನೆ. ಇದೀಗ ಇಂತಹ ಪವಿತ್ರ ದಿನದಂದು 26 ವರ್ಷದ ಪ್ರಾಚಿ ಮಹೇಶ್ವರಿ ತನ್ನ ಒಂದು ಕಿಡ್ನಿಯನ್ನು ತನ್ನ 20 ವರ್ಷದ ಸಹೋದರ ಅಂಕುರ್ಗೆ ದಾನ ಮಾಡಿ ಗಮನ ಸೆಳೆದಿದ್ದಾಳೆ.
ತನ್ನ ಸಹೋದರನಿಗೆ ಹುಟ್ಟಿನಿಂದಲೇ ಕಿಡ್ನಿ ಸಂಬಂಧಿತ ಸಮಸ್ಯೆ ಇತ್ತು, ಎಂದಾದರೂ ಅವರಿಗೆ ಕಿಡ್ನಿ ಕಸಿ ಮಾಡಲೇಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ತನ್ನ ತಮ್ಮನಿಗೆ ಅಕ್ಕ ಈ ನಿರ್ಧಾರಕ್ಕೆ ಮುಂದಾಗಿದ್ದಾಳೆ.ರಕ್ಷಾ ಬಂಧನಕ್ಕೂ ಮುನ್ನ ಸಹೋದರಿಯರು ಕಿಡ್ನಿ ದಾನ ಮಾಡುವ ಮೂಲಕ ಸಹೋದರರ ಜೀವ ಉಳಿಸಿದ್ದಾರೆ.
ತನ್ನ ಸಹೋದರನಿಗೆ ಹುಟ್ಟಿನಿಂದಲೇ ಕಿಡ್ನಿ ಸಂಬಂಧಿತ ಸಮಸ್ಯೆ ಇತ್ತು, ಎಂದಾದರೂ ಅವರಿಗೆ ಕಿಡ್ನಿ ಕಸಿ ಮಾಡಲೇಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದರು.ನನ್ನ ಪೋಷಕರು ಹಾಗೂ ಅಕ್ಕ ನಾನು ಕಿಡ್ನಿ ಪರೀಕ್ಷೆಯನ್ನು ಮಾಡಿಸಿದ್ದೆವು ಅದರಲ್ಲಿ ನನ್ನ ಕಿಡ್ನಿ ಮಾತ್ರ ಅವನ ಕಿಡ್ನಿಗೆ ಸರಿಯಾಗಿ ಮ್ಯಾಚ್ ಆಗುತ್ತೆ ಎಂದು ವೈದ್ಯರು ತಿಳಿಸಿದ್ದರು.
ಆ ಸಮಯದಲ್ಲಿ ಪ್ರಾಚಿ ಸಿಎ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು,ಶಸ್ತ್ರ ಚಿಕಿತ್ಸೆ ಬಳಿಕ ತುಂಬಾ ದಿನ ರಜೆ ಬೇಕಾಗಬಹುದು ಎಂದು ಯೋಚಿಸಿದ್ದು, ಕಂಪನಿಯಲ್ಲಿ ಅಷ್ಟು ದಿನ ರಜೆ ಕೊಡುವುದಿಲ್ಲ ಎಂದು ಅರಿತ ಸಹೋದರಿ ರಾಜೀನಾಮೆ ನೀಡಿದ್ದರು. ಈ ಸಹೋದರ ಅಧ್ಯಯನವನ್ನು ಮತ್ತೆ ಪ್ರಾರಂಭಿಸಿದ್ದಾನೆ.ಪಿಜಿ ಮಾಡುತ್ತಿದ್ದಾನೆ. ತಾನು ಸ್ವಯಂ ಉದ್ಯೋಗ ಪ್ರಾರಂಭಿಸಿರುವುದಾಗಿ ಪ್ರಾಚಿ ಹೇಳಿದ್ದಾರೆ.