ಕರಾವಳಿ

ಸುಳ್ಯ: ಲೋಕಾಯುಕ್ತ ಬಲೆಗೆ ಬಿದ್ದ ಸಂಪಾಜೆ- ಅರಂತೋಡು ಗ್ರಾಮ ಲೆಕ್ಕಾಧಿಕಾರಿ, ಭಾರಿ ದುಡ್ಡಿಗೆ ಬೇಡಿಕೆ ಇಟ್ಟಾಗ ರೆಡ್ ಹ್ಯಾಂಡ್ ಆಗಿ ತಗ್ಲಾಕ್ಕಿಕೊಂಡಿದ್ದು ಹೇಗೆ..?

ನ್ಯೂಸ್ ನಾಟೌಟ್: ಹಣದ ಬೇಡಿಕೆ ಇಟ್ಟು ಲಂಚ ಸ್ವೀಕಾರ ಮಾಡುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಸಂಪಾಜೆ- ಅರಂತೋಡಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನು ಬಂಧಿಸಿದ್ದಾರೆ.

ಅರಂತೋಡಿನ ವ್ಯಕ್ತಿಯೊಬ್ಬರು ಹಕ್ಕು ಖುಲಾಸೆಗಾಗಿ ಅರ್ಜಿ ಸ್ವೀಕರಿಸಿದ್ದರು. ಈ ವೇಳೆ ಕಡತ ವಿಲೇವಾರಿಗಾಗಿ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಮಿಯಾಸಾಬ್ ಮುಲ್ಲಾ ಇಂದು (ಶನಿವಾರ) ಹಣ ಸ್ವೀಕರಿಸುತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಸುಳ್ಯ ತಾಲೂಕು ಕಚೇರಿಯಲ್ಲಿ ಇದೀಗ ಗ್ರಾಮ ಲೆಕ್ಕಾಧಿಕಾರಿಯ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಎಷ್ಟು ಹಣ ತೆಗೆದುಕೊಂಡಿದ್ದಾರೆ ಅನ್ನುವುದು ಇನ್ನೂ ಗೊತ್ತಾಗಿಲ್ಲ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಈ ಮೂಲಕ ಲಂಚ ಭ್ರಷ್ಟಾಚಾರ ಸುಳ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅನ್ನುವುದು ಸಾಬೀತಾದಂತಾಗಿದೆ. ಎಸ್ಪಿ ಸೈಮನ್, ಡಿವೈಎಸ್ಪಿ ಚೆಲುವರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Related posts

ಪುತ್ತೂರು: ಚಡ್ಡಿ ಗ್ಯಾಂಗ್ ಹಾಗೂ ತಲವಾರಿನ ಕಟ್ಟು ಕಥೆ ಕಟ್ಟಿದ ಮಹಿಳೆ, ಈಕೆಯ ಕಥೆಗೆ ಸ್ಥಳಕ್ಕೆ ಬಂದು ಸರಿಯಾಗಿಯೇ ನಿರ್ದೇಶನ ಮಾಡಿದ ಪೊಲೀಸರು..!

ಇನ್ನೂ ನಿದ್ದೆಯಿಂದ ಎದ್ದೇಳದ ಅಧಿಕಾರಿಗಳು, ಸಾಲು ಬಿಂದಿಗೆ ಹಿಡಿದುಕೊಂಡು ವ್ಯಕ್ತಿಯ ಆಕ್ರೋಶ

ಮನೆ ಮಂದಿಯ ಮುಖದಲ್ಲಿ ಜೇನು ಗಡ್ಡ..! ಅರೆ..! ಇದೇನಿದು ಜೇನುಗಡ್ಡದ ಕುಟುಂಬ..! ಈ ಚಮತ್ಕಾರ ಅದ್ಹೇಗೆ ಮಾಡುತ್ತಾರೆ?