ನ್ಯೂಸ್ ನಾಟೌಟ್: ದೇವಸ್ಥಾನಕ್ಕೆ ಸಂಬಂಧಿಸಿದ ಕಲ್ಯಾಣಿಯಲ್ಲಿ ಬೆಳ್ಳಂಬೆಳಗ್ಗೆ ಜೋಡಿ ಶವಗಳು ತೇಲುವುದು ಕಂಡುಬಂದಿದ್ದು, ಬೆಳಗಾವಿ ನಗರದ ಕಪಿಲೇಶ್ವರ ಮಂದಿರದ ಹೊಂಡದಲ್ಲಿ ಒಂದು ಗಂಡು ಒಂದು ಹೆಣ್ಣಿನ ಶವ ಪತ್ತೆಯಾಗಿದೆ.
ಈ ನಿಗೂಢ ಸಾವಿನ ಬಗ್ಗೆ ಹಲವು ಅನುಮಾನಗಳು ಸಂಶಯ ಮೂಡಿದ್ದು, ಇವರಿಬ್ಬರು ತಡರಾತ್ರಿ ಆತ್ಮಹ* ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಮುಖ ಕೆಳಗಾಗಿ ಮೃತದೇಹಗಳು ಬಿದ್ದಿರುವುದರಿಂದ ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಬುಧವಾರ ಬೆಳಗ್ಗೆ ಎಂದಿನಂತೆ ಜನ ವಾಕಿಂಗ್‌ಗೆ ಹೋದಾಗ ಶವಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಈ ಸುದ್ದಿ ಹರಡುತಿದ್ದಂತೆಯೇ ತಂಡೋಪತಂಡವಾಗಿ ವೀಕ್ಷಿಸಲು ಜನರು ಆಗಮಿಸಿದ್ದಾರೆ.
ಯುವತಿ ಹಸಿರು ಚೂಡಿದಾರ್ ಧರಿಸಿದ್ದರೆ, ಯುವಕ ನೀಲಿ ಟೀ ಶರ್ಟ್ ಧರಿಸಿದ್ದಾರೆ. ಅಂದಾಜು ವಯಸ್ಸು 35ರಿಂದ 40 ಆಗಿರಬಹುದು, ಇವರು ವಿವಾಹಿತರು ಎಂಬುದಾಗಿ ಜನ ಮಾತನಾಡಿಕೊಂಡಿದ್ದರು ಎನ್ನಲಾಗಿದೆ.
ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮೃ* ತದೇಹಗಳನ್ನು ಮೇಲಕ್ಕೆತ್ತಲು ವ್ಯವಸ್ಥೆ ಮಾಡುತ್ತಿದ್ದಾರೆ.