ದೇಶ-ಪ್ರಪಂಚ

ವಿಶ್ವ ಹಿಂದೂ ಪರಿಷತ್‌ ಮೆರವಣಿಗೆ ವೇಳೆ ಪ್ರಾರಂಭವಾದ ಘರ್ಷಣೆ, ಗುರುಗ್ರಾಮದಲ್ಲಿ ಮಸೀದಿಗೆ ಬೆಂಕಿ ಹಚ್ಚಿದ ಉದ್ರಿಕ್ತರು..!

ನ್ಯೂಸ್ ನಾಟೌಟ್: ಹರಿಯಾಣದ ಗುರುಗ್ರಾಮ ಈಗ ಬೆಂಕಿ ಕೆಂಡವಾಗಿದೆ. ನೂಹ್‌ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್‌ ಮೆರವಣಿಗೆ ವೇಳೆ ಪ್ರಾರಂಭವಾದ ಘರ್ಷಣೆ ಪಕ್ಕದ ಗುರುಗ್ರಾಮ ಜಿಲ್ಲೆಗೂ ವ್ಯಾಪಿಸಿದೆ.

ಗುರುಗ್ರಾಮದ ಸೆಕ್ಟರ್‌ 57ರಲ್ಲಿ ಮಸೀದಿಯೊಂದಕ್ಕೆ ಬೆಂಕಿ ಹಚ್ಚಲಾಗಿದೆ, 26 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಪೊಂದು ಬೆಂಕಿ ಹಂಚಿದ್ದು, ಇದರಲ್ಲಿ ಇಬ್ಬರು ಗಾಯಗೊಂಡಿದ್ದರು. ಆ ಪೈಕಿ ಓರ್ವ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಬಿಹಾರ ಮೂಲದ ಸಾದ್‌ ಎಂಬವರೇ ಮೃತಪಟ್ಟವರು. ನೂಹ್‌ನಲ್ಲಿ ಘರ್ಷಣೆ ಪ್ರಾರಂಭವಾದ ಬಳಿಕ ಈ ಸಂಬಂಧ ನಡೆದ ನಾಲ್ಕನೇ ಸಾವು ಇದಾಗಿದೆ. ಸೆಕ್ಟರ್ 57ರಲ್ಲಿರುವ ಅಂಜುಮನ್‌ ಮಸೀದಿಗೆ ಮಧ್ಯರಾತ್ರಿ ಗುಂಪು ತಲಿಪಿದ್ದು, ಗುಂಪಿನಲ್ಲಿದ್ದವರು ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

20 ಮಂದಿಗೆ ಗಾಯ

ಹರಿಯಾಣದ ನೂಹ್‌ ಪಟ್ಟಣದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್‌ ಆಯೋಜಿಸಿದ್ದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡು‌ವೆ ಘರ್ಷಣೆ ನಡೆದಿತ್ತು. ಉದ್ರಿಕ್ತರು ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಗೃಹರಕ್ಷಕ ದಳದ ಇಬ್ಬರು ಸಿಬ್ಬಂದಿ ಹಾಗೂ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ. ಪೊಲೀಸ್ ವಾಹನಗಳಿಗೂ ಹಾನಿಯಾಗಿದೆ. ಡಿಎಸ್‌ಪಿ ಸೇರಿದಂತೆ ಹಲವು ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

ಆರು ಕ್ಷೌರಿಕರನ್ನು ಅಪಹರಿಸಿ ಕೊಂದ ಉಗ್ರರು..! ಈ ಘಟನೆ ನಡೆದದ್ದೆಲ್ಲಿ..?

ರಾಜಕೀಯ ಮುಖಂಡನ ಕುಟುಂಬ ಕಾರ್ಯಕ್ರಮದ ವೇಳೆ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು

ವಿದೇಶದಲ್ಲಿ ಕುಟುಂಬಸ್ಥರು ಮೃತರಾದರೆ ಸ್ವದೇಶಕ್ಕೆ ತರಲು ಇರುವ ಕಾನೂನಾತ್ಮಕ ತೊಡಕುಗಳೇನು? ದಿವಂಗತ ಸ್ಪಂದನಾ ವಿಜಯರಾಘವೇಂದ್ರ ಪಾರ್ಥಿವ ಶರೀರ ತರಲು ತಡವಾಗಿದ್ದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ