ಕರಾವಳಿ

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆಯೊಡ್ಡಿದ್ದ ಮಂಗಳೂರಿನ ಜಯೇಶ್ ಪೂಜಾರಿಗೆ ಐಐಎಸ್‌ಸಿ ಮೇಲೆ ದಾಳಿ ಮಾಡಿದ್ದ ಭಯೋತ್ಪಾದಕರ ನಂಟು..!

ನ್ಯೂಸ್ ನಾಟೌಟ್: ಕೇಂದ್ರ ಸಚಿವ ಬಿಜೆಪಿ ಮುಖಂಡ ನಿತಿನ್ ಗಡ್ಕರಿಗೆ ಜೀವ ಬೆದರಿಕೆಯೊಡ್ಡಿದ್ದ ಮಂಗಳೂರು ಮೂಲದ ಜಯೇಶ್ ಪೂಜಾರಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಐಐಎಸ್‌ಸಿ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಅಫ್ಸರ್ ಪಾಷಾನೊಂದಿಗೆ ಜಯೇಶ್‌ ಪೂಜಾರಿ ಸಂಪರ್ಕ ಹೊಂದಿದ್ದಾನೆ ಅನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ. 2005ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಮೇಲೆ ಭಯೋತ್ಪಾದಕರ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಭಯೋತ್ಪಾದಕ ಅಫ್ಸರ್ ಪಾಷಾ ಇದ್ದ. ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಪಾಷಾಗೆ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕವಿದೆ.

ಜಯೇಶ್‌ ಪೂಜಾರಿ ಪಾಷಾ ಜೊತೆ ಒಪ್ಪಂದ ಮಾಡಿಕೊಂಡು ಗಡ್ಕರಿಗೆ ಕರೆ ಮಾಡುವ ಯೋಜನೆ ರೂಪಿಸಿದ್ದ. ಈ ಬಗ್ಗೆ ಮಹಾರಾಷ್ಟ್ರ ವಿಶೇಷ ಕಾರ್ಯಪಡೆಯ ಸಿಬ್ಬಂದಿ ಹಿಂಡಲಗಾ ಜೈಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಜಯೇಶ್‌ ಪೂಜಾರಿ ಜ.14ರಂದು ಕೇಂದ್ರ ಸಚಿವರಿಗೆ 100 ಕೋಟಿ ರೂ. ನೀಡುವಂತೆ ಬೆದರಿಯೊಡ್ಡಿದ್ದ ಅಲ್ಲದೆ ಹಣ ನೀಡದಿದ್ದಲ್ಲಿ ಗಡ್ಕರಿ ಅವರ ಜನ ಸಂಪರ್ಕ ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಮಹಾರಾಷ್ಟ್ರ ಪೊಲೀಸರು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದರು.

ಬಳಿಕ ಮಾರ್ಚ್ 21 ರಂದು ಮತ್ತೊಮ್ಮೆ ಗಡ್ಕರಿ ಅವರ ಜನಸಂಪರ್ಕ ಕಚೇರಿಗೆ ಬೆದರಿಕೆ ಕರೆ ಬಂದಿದ್ದು, ಈ ವೇಳೆ 10 ಕೋಟಿ ರೂ.ಗೆ ಬೇಡಿಕೆ ಇರಿಸಿದ್ದ ಎನ್ನಲಾಗಿದೆ. ನಿರಂತರ ಬೆದರಿಕೆ ಕರೆಗಳ ಬಳಿಕ ಮಾರ್ಚ್ 28 ರಂದು ಮಹಾರಾಷ್ಟ್ರ ಪೊಲೀಸರು ಪೂಜಾರಿಯನ್ನು ವಶಕ್ಕೆ ಪಡೆದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Related posts

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಎನ್‌ಎಂಸಿ ವಿದ್ಯಾರ್ಥಿಗೆ ಅವಕಾಶ

ನಾಳೆ(ಡಿ.3) ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ, ಚಂಡಮಾರುತದಿಂದಾಗಿ ರೆಡ್ ಅಲರ್ಟ್ ಘೋಷಣೆ

ಸುಳ್ಯ: ಬಸ್‌ ನಲ್ಲಿ ಕಳೆದು ಹೋದ ಮಗುವಿನ ಚಿನ್ನದ ಸರ, ಪ್ರಾಮಾಣಿಕವಾಗಿ ವಾರೀಸುದಾರರಿಗೆ ಹಿಂತಿರುಗಿಸಿದ ಬಸ್‌ ಮಾಲೀಕ