ಸುಳ್ಯ

ಸುಳ್ಯ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ, ರಕ್ತದಾನ ಮಾಡಿ ಜೀವ ಉಳಿಸಿ: ಪಿ.ಬಿ. ಸುಧಾಕರ ರೈ

ನ್ಯೂಸ್ ನಾಟೌಟ್ : ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜು.7 ರಿಂದ ಜು. 10 ವರೆಗೆ ಯುವ ರೆಡ್ ಕ್ರಾಸ್ ಘಟಕ ವಾರ್ಷಿಕ ವಿಶೇಷ ಶಿಬಿರ ನಡೆಯಲಿದೆ. ಶುಕ್ರವಾರ ಇದರ ಉದ್ಘಾಟನಾ ಸಮಾರಂಭವನ್ನು ಸುಳ್ಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಪಿ.ಬಿ. ಸುಧಾಕರ ರೈ ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಪಿ.ಬಿ ಸುಧಾಕರ ರೈ, ‘ರಕ್ತದಾನ ಮಾಡುವುದು ಮಹತ್ವದ ಕಾರ್ಯ, ಒಬ್ಬರ ಜೀವ ಉಳಿಸುವ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ. ರಕ್ತದಾನದ ಮಹತ್ವ ವನ್ನು ಸಾವರ್ಜನಿಕರಿಗೆ ತಿಳಿಸಬೇಕು ಎಂದರು. ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ಮಾತನಾಡಿ, ‘ಇಂದಿನ ಯುವಜನತೆ ರಕ್ತದಾನದ ಮಹತ್ವವನ್ನು ತಿಳಿದಿರಬೇಕು ಎಂದರು.

ಅಧ್ಯಕತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೆ. ಆರ್ ಮಾತನಾಡಿ, ‘ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು, ಪಠ್ಯೇತರ ಚಟುವಟಿಕೆಗಳಲ್ಲಿ ಮಾತ್ರ ತೊಡಗದೆ, ಸಮಾಜದಲ್ಲಿ ಸಹಾಯ ಮಾಡುವ , ಮೌಲ್ಯ ಹಾಗೂ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ತಿಳುವಳಿಕೆ, ಉದ್ಯೋಗ , ಪ್ರಥಮ ಚಿಕಿತ್ಸೆ ಬಗ್ಗೆ ಹೆಚ್ಚು ತಿಳುವಳಿಕೆಗೆ ಪ್ರಯೋಜನ’ ಎಂದು ಹೇಳಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಡಾ. ಜಯಶ್ರೀ ಕೆ, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಉದಯಶಂಕರ್ ಹೆಚ್ , ಸಹ ಸಂಚಾಲಕಿ ಸುರೇಖಾ ಹೆಚ್ , ಶಿಬಿರದಲ್ಲಿ ಪಾಲ್ಗೊಳುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳು , ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.

Related posts

ಪಂಜ:ದಕ್ಷಿಣ ಭಾರತದ ಎರಡನೇ ಮಾಸ್ಟ‌ರ್ ಅಥ್ಲೆಟಿಕ್;ಪಂಜದ ಭಾರತಿ ಗುಂಡಡ್ಕ ಚಾಂಪಿಯನ್..!

ನಾಳೆ ನಿಸರ್ಗ ಮಕ್ಕಳ ಬೇಸಿಗೆ ಶಿಬಿರಕ್ಕೆ ಅದ್ಧೂರಿ ತೆರೆ

ಸುಳ್ಯದ ಸೆಲ್ ಹೌಸ್ ಮೊಬೈಲ್ ನಲ್ಲಿ OPPO Reno 13 ಬಿಡುಗಡೆ