ಪುತ್ತೂರು: ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಯುವಕನೊಬ್ಬನನ್ನು 67 ವರ್ಷದ ಮುದುಕ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮುರ ಎಂಬಲ್ಲಿ ವಿಚಿತ್ರ ಪ್ರಕರಣ ನಡೆದಿದೆ. 20 ವರ್ಷದ ಯುವಕನೋರ್ವನ ಮೇಲೆ ಮುರ ನಿವಾಸಿ ಮಹಮ್ಮದ್ ಹನೀಫ್ (67) ಎಂಬಾತ ಬಲತ್ಕಾರ ಮಾಡಿ ಅತ್ಯಾಚಾರ ನಡೆಸಿರುವುದಾಗಿ ತಿಳಿದು ಬಂದಿದೆ. ಯುವಕನ ತಂದೆ ದೂರು ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.