ಕರಾವಳಿ

ಅಧಿಕಾರಿಗಳ ಗ್ರಾಮ ವಾಸ್ತವ್ಯವನ್ನು ಗ್ರಾಮಸ್ಥರು ಸದುಪಯೋಗ ಪಡೆದುಕೊಳ್ಳಿ: ಸಚಿವ ಅಂಗಾರ

894

ಸುಳ್ಯ : ಗ್ರಾಮ ವಾಸ್ತವ್ಯ ಕಂದಾಯ ಇಲಾಖೆಯ ಕಾರ್ಯಕ್ರಮವಾಗಿದ್ದು ಏಕ ಕಾಲದಲ್ಲಿ ಇಂದು ಎಲ್ಲಾ ಜಿಲ್ಲೆಯಲ್ಲಿ ನಡೆಯುತ್ತಿದೆ.ಈ ವಾಸ್ತವ್ಯದಲ್ಲಿ ಎಲ್ಲಾ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಸ್ಥಳೀಯ ಸಿಬ್ಬಂದಿಗಳಿದ್ದು ಜನರು ಈ ಗ್ರಾಮ ವಾಸ್ತವ್ಯದ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಚಿವ ಎಸ್ ಅಂಗಾರ ಅವರು ಹೇಳಿದರು.

ಅಮರ ಮುಡ್ನೂರು ಸಹಕಾರಿ ಬ್ಯಾಂಕ್ ನಲ್ಲಿ ನಡೆದ ಜಿಲ್ಲಾಧಿಕಾರಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೇ.ವಿ ಮಾತನಾಡಿ ಕಂದಾಯ ಇಲಾಖೆ, ಅರಣ್ಯ ಇಲಾಖೆಗೆ ಸಂಬಂಧಿಸಿದ , ಡೀಮ್ಡ್ ಫಾರೆಸ್ಟ್, ಸರಕಾರಿ ಶಾಲೆ, ಸರಕಾರಿ ಆಸ್ಪತ್ರೆ, ಎಸ್.ಎಸ್ಸಿ ಎಸ್.ಟಿ. ಕಾಲನಿ ಗಳ ಸಮಸ್ಯೆ ಹಾಗೂ ಕಡತ ವಿಲೇವಾರಿಯ ಕುರಿತು ಇಂದಿನ ಗ್ರಾಮ ವಾಸ್ತವ್ಯದಲ್ಲಿ ಕ್ರಮ ಕೈಗೊಳ್ಳಲಾಗುವುದು. ಇಂದು ಬಂದ ಅರ್ಜಿಗಳ ಕುರಿತು ಅ.29- 30 ರಂದು ಪುನರ್ ಪುನರ್ ಪರಿಶೀಲನೆಯನ್ನು ತಾಲೂಕು ಮಟ್ಟದಲ್ಲಿ ಮಾಡಲಾಗುವುದು ಎಂದರು. ಗ್ರಾಮಸ್ಥರಾದ ಎಂ.ಜಿ ಸತ್ಯನಾರಾಯಣ ಅವರು ವಿದ್ಯುತ್ ,ರಸ್ತೆ , ಬೋರ್ ವೆಲ್ ಗಳ ಸಮಸ್ಯೆಗಳ ಕುರಿತು ಅಹವಾಲು ಸ್ವೀಕಾರದ ಸಂದರ್ಭ ಬೆಳಕು ಚೆಲ್ಲಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಪದ್ಮಪ್ರಿಯಾ ಮೆಲ್ತೋಡಿ, ತಹಶೀಲ್ದಾರ್ ಅನಿತಾ ಲಕ್ಷ್ಮಿ, ಡಿಡಿಎಲ್ ಆರ್ ನಿರಂಜನ್ ಎಂ.ಎಲ್ ,ತಾಲೂಕು ಜಿಲ್ಲಾ‌ಮಟ್ಟದ ವಿವಿಧ ಇಲಾಖೆಯ ಅಧಿಕಾರಿ ವರ್ಗ , ಅಮರ ಮಡ್ನೂರು ಗ್ರಾ.ಪಂ. ಸದಸ್ಯರು ಹಾಗೂ ಸಿಬಂದಿ ವರ್ಗದವರು ಉಪಸ್ಥಿತರಿದ್ದರು. ಸಹಾಯಕ ಆಯುಕ್ತ ಯತೀಶ್ ಉಲ್ಲಾಳ್ ಸ್ವಾಗತಿಸಿ ತಾ.ಪಂ. ಎಇ ಭವಾನಿಶಂಕರ್ ಎನ್ . ವಂದಿಸಿದರು.

See also  ಪುತ್ತೂರು: ಅತ್ಯಾಚಾರ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ..! 8 ವರ್ಷದ ಬಳಿಕ ತೀರ್ಪು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget