ವೈರಲ್ ನ್ಯೂಸ್

ಮೊಘಲರ ಕಾಲದ 400 ನಾಣ್ಯಗಳು ಪತ್ತೆ..! ದೇವಾಲಯ ನಿರ್ಮಾಣದ ವೇಳೆ ಸಿಕ್ಕ ನಿಧಿಯ ಬೆಲೆಯೆಷ್ಟು ಗೊತ್ತಾ?

ನ್ಯೂಸ್‌ನಾಟೌಟ್‌: ಮೊಘಲರ ಕಾಲದ 400 ನಾಣ್ಯಗಳು ದೇವಸ್ಥಾನ ನಿರ್ಮಾಣದ ಕಾಮಗಾರಿ ವೇಳೆ ಪತ್ತೆಯಾದ ಘಟನೆ ಉತ್ತರಪ್ರದೇಶದ ಸಹರಾನ್‍ಪುರದಲ್ಲಿ ಪುರಾತನ ಕಾಲದ ನಾಣ್ಯಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಬಳಿಕ ಸುಮಾರು 400 ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಮೊಘಲರ ಕಾಲದಲ್ಲಿ ಬಳಸುತ್ತಿದ್ದ ಈ ನಾಣ್ಯಗಳಲ್ಲಿ ಅರೆಬಿಕ್‌ ಭಾಷೆಯ ಲಿಪಿ ಇರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸಹರಾನ್‍ಪುರದ ಹುಸೈನ್‍ಪುರ ಗ್ರಾಮದ ಸತಿಧಾಮ ದೇವಾಲಯದ ಆವರಣ ಗೋಡೆಯನ್ನು ತೆರವುಗೊಳಿಸಿ ಮಣ್ಣು ಅಗೆಯುತ್ತಿದ್ದ ವೇಳೆ ಈ ನಾಣ್ಯಗಳು ಪತ್ತೆಯಾಗಿವೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಸಾಗರ್‌ ಜೈನ್‌ ತಿಳಿಸಿದ್ದಾರೆ.

ಪುರಾತತ್ವ ಶಾಸ್ತ್ರ ಇಲಾಖೆ ಸಹ ನಾಣ್ಯಗಳನ್ನು ಪರಿಶೀಲಿಸುತ್ತಿದ್ದು ಪತ್ತೆಯಾಗಿರುವ ನಾಣ್ಯಗಳು ಅಂದಾಜು 350 ವರ್ಷಗಳ ಹಿಂದಿನದ್ದಾಗಿದ್ದು, ಪ್ರತಿಯೊಂದು ನಾಣ್ಯವು 11 ಗ್ರಾಂ ತೂಕವಿದೆ.

ಪ್ರತಿ ನಾಣ್ಯದ ಪ್ರಸ್ತುತ ಮಾರುಕಟ್ಟೆ ಬೆಲೆ 3,500 ರೂ. ಎಂದು ತಿಳಿದುಬಂದಿದೆ. ಹುಸೈನ್‍ಪುರ್‍ದಲ್ಲಿ ದೊರೆತ ಈ ನಾಣ್ಯಗಳು ಮೊಘಲ್‌ ದೊರೆ 2ನೇ ಶಾ ಅಲಾಂ ಕಾಲಘಟ್ಟದ್ದಾಗಿದೆ. ಇವುಗಳಲ್ಲಿರುವ ಪಾರ್ಸಿ ಭಾಷೆಯ ಲಿಪಿಯಾಗಿದೆ ಎಂದು ಇತಿಹಾಸಕಾರ ರಾಜೀವ್‌ ಉಪಾಧ್ಯಾಯ ತಿಳಿಸಿದ್ದಾರೆ.

Related posts

ಗರ್ಭಗುಡಿ ಪ್ರವೇಶಿಸಿದ ಮಹಿಳೆಯನ್ನು ಎಳೆದು ಹೊರ ಹಾಕಿದ್ದೇಕೆ ಸಿಬ್ಬಂದಿ..! ರಾಜವಂಶಸ್ಥೆಯನ್ನು ಬಂಧಿಸಿದ್ದೇಕೆ ಪೊಲೀಸರು? ಅಷ್ಟಕ್ಕೂ ಮಧ್ಯರಾತ್ರಿ ನಡೆದದ್ದಾದರೂ ಏನು? ಇಲ್ಲಿದೆ ವೈರಲ್ ವಿಡಿಯೋ

ಸೈಫ್ ಆಲಿ ಖಾನ್ ಗೆ ಇರಿತ ಪ್ರಕರಣ ಭೇದಿಸಲು ಎಂಟ್ರಿ ಕೊಟ್ಟ ಉಡುಪಿಯ ಸೂಪರ್ ಕಾಪ್..!, ಆರೋಪಿ ಪಾತಾಳದಲ್ಲಿದ್ದರೂ ಹುಡುಕಬಲ್ಲ ಖಡಕ್ ಪೊಲೀಸ್ ಆಫೀಸರ್ ಯಾರು ಗೊತ್ತಾ..?

ತೆಲುಗು ಬಿಗ್ ಬಾಸ್​ ಗೆದ್ದ ಕನ್ನಡಿಗ..! ಮೈಸೂರು ಮೂಲದ ಯುವಕನಿಗೆ ಬಿಗ್ ಬಾಸ್ ಕಿರೀಟ