ವೈರಲ್ ನ್ಯೂಸ್

ಹೆಲಿಕಾಪ್ಟರ್ ಪತನ, ಮೂವರು ಪ್ರಾಣಾಪಾಯದಿಂದ ಪಾರು

ನ್ಯೂಸ್ ನಾಟೌಟ್: ಭಾರತೀಯ ಕರಾವಳಿ ಕಾವಲು ಪಡೆಯ (ಐಸಿಜಿ) ಹೆಲಿಕಾಪ್ಟರ್‌ ಪತನಗೊಂಡಿದೆ. ಕೊಚ್ಚಿಯ ನೆಡುಂಬಸ್ಸೇರಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಟೇಕ್‌–ಆಫ್‌ ವೇಳೆ ದುರಂತಕ್ಕೀಡಾಗಿದೆ.

ಮೂಲಗಳ ಪ್ರಕಾರ, ಐಸಿಜಿಯ ಮೂವರು ಸಿಬ್ಬಂದಿ ಹೆಲಿಕಾಪ್ಟರ್‌ನಲ್ಲಿದ್ದರು. ಎಲ್ಲರಿಗೂ ಸಣ್ಣ ಪ್ರಮಾಣದ ಗಾಯಗಳಾಗಿವೆ. ಪ್ರಕರಣದ ಬಳಿಕ ವಿಮಾನ ನಿಲ್ದಾಣದಲ್ಲಿ ಪ್ರಯಾಣ ರದ್ದುಪಡಿಸಲಾಗಿದೆ. ಇಲ್ಲಿಗೆ ಬರಬೇಕಿದ್ದ ವಿಮಾನಗಳನ್ನು ಸಮೀಪದ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ನಡೆದಿದೆ. ಇದು ದೊಡ್ಡ ದುರಂತವೇನಲ್ಲ. ರನ್‌ವೇಗೆ ಸಮೀಪದಲ್ಲೇ ಘಟನೆ ನಡೆದಿರುವುದರಿಂದ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಪತನದಿಂದ ಆಗಿದ್ದ ಹಾನಿ ಸರಿಪಡಿಸುವ ಕಾರ್ಯ ನಡೆಯುತ್ತಿದೆ. ವಿಮಾನ ನಿಲ್ದಾಣವನ್ನು ಸಂಜೆ ಪುನರಾರಂಭಿಸಲಾಗುವುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related posts

ಹಾರಾಡುವಾಗ ಮನೆಯ ಮೇಲೆ ಬಿದ್ದ ವಿಮಾನದ ಬಿಡಿ ಭಾಗಗಳು..! ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ ಮನೆ ಮಾಲಿಕ..!

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಆರೋಪ ಸಾಬೀತು..? ಎಸ್.ಐ.ಟಿ ಕಚೇರಿಯಿಂದ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಪ್ರಜ್ವಲ್ ಸ್ಥಳಾಂತರ..!

ಮಗುವಿನೊಂದಿಗೆ ಹೇಮಾವತಿ ನಾಲೆಗೆ ಹಾರಿ ಇಡೀ ಕುಟುಂಬವೇ ಸಾಮೂಹಿಕ ಆತ್ಮಹತ್ಯೆ..! ಇಲ್ಲಿದೆ ಮನಕಲಕುವ ಘಟನೆ..!