ದೇಶ-ಪ್ರಪಂಚ

BUDGET 2023: ‘ಮೋದಿ ಲೆಕ್ಕವೆಲ್ಲ ಕನ್ನಡಿಯೊಳಗಿನ ಗಂಟು’, ಈ ಬಜೆಟ್‌ನಲ್ಲಿ ಧಮ್ಮಿಲ್ಲ: ಸಿದ್ದರಾಮಯ್ಯ ಟೀಕಾಸ್ತ್ರ

ನ್ಯೂಸ್ ನಾಟೌಟ್: ಪ್ರಸಕ್ತ 2023ನೇ ಸಾಲಿನಲ್ಲಿ ಕೇಂದ್ರ ಸರಕಾರ ಮಂಡಿಸಿರುವ ಬಜೆಟ್‌ ಅನ್ನು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಇದು ಅತ್ಯಂತ ನಿರಾಶದಾಯಕ ಬಜೆಟ್ ಆಗಿದೆ. ಮೋದಿ ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ. ಮೋದಿ ಲೆಕ್ಕವೆಲ್ಲ ಕನ್ನಡಿಯೊಳಗಿನ ಗಂಟು ಎಂದು ಟೀಕಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ನಿರ್ಮಲಾ ಅವರ ಬಜೆಟ್‌ನಲ್ಲಿ ಕೃಷಿ, ನೀರಾವರಿ, ಕೈಗಾರಿಕೆ, ಗ್ರಾಮೀಣಾಭಿವೃದ್ದಿಗೆ ಏನೂ ಕೊಟ್ಟಿಲ್ಲ. ಉದ್ಯೋಗಕ್ಕೂ ಭಾರಿ ಹೊಡೆತ ಬಿದ್ದಿದೆ. 2023-024 ರಲ್ಲಿ ಹದಿನೆಂಟು ಲಕ್ಷ ಜನರು ಸಾಲ ಮಾಡಲಿದ್ದಾರೆ. ಅದರಲ್ಲಿ ಸುಮಾರು ಶೇ. 42 ರಷ್ಟು ಬಡ್ಡಿಯೇ ಆಗಲಿದೆ. ಮನಮೋಹನ್ ಸಿಂಗ್‌ ಅವಧಿಯಲ್ಲಿ 54.90 ಲಕ್ಷ ಕೋಟಿ ಸಾಲ ಇತ್ತು. ಕಳೆದ 10 ವರ್ಷದಲ್ಲಿ 1 ಲಕ್ಷದ 18 ಸಾವಿರ ಕೋಟಿ ರೂ. ಸಾಲ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಭದ್ರಾ ಮೇಲ್ದಂಡೆ ಯೋಜನೆಗೆ ನೋಟಿಫಿಕೇಶನ್ ಆಗಿಲ್ಲ. ನೋಟಿಫಿಕೇಶನ್ ಆಗದೆ ಹಣ ಖರ್ಚು ಮಾಡುವುದಕ್ಕೆ ಆಗುವುದಿಲ್ಲ. ಚುನಾವಣೆಗಾಗಿ ತೋರಿಸುವ ತಮಾಷೆಯ ಪೆಟ್ಟಿಗೆಯ ಬಜೆಟ್ ಆಗಿದೆ. ಇನ್‌ಕಮ್ ಟ್ಯಾಕ್ಸ್‌ ಮೂಲಕ ಜನರಿಂದ ವಸೂಲಿಗೆ ಸರಕಾರ ಮುಂದಾಗಿದ್ದು ಅತ್ಯಂತ ನಿರಾಶೆಯ ಸಂಗತಿಯಾಗಿದೆ ಎಂದು ತಿಳಿಸಿದರು.

Related posts

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ, ಅಂಚೆ ಇಲಾಖೆಯಲ್ಲಿ ಖಾಲಿ ಬಿದ್ದಿರುವ ಸಾವಿರಾರು ಹುದ್ದೆಗಳಿಗೆ ಅರ್ಜಿ ಆಹ್ವಾನ, ಜೂನ್ 23 ರ ಒಳಗೆ ಅರ್ಜಿ ಸಲ್ಲಿಸಲು ಅವಕಾಶ

ಮದುವೆಗೆ ಹೊರಟ ಅಮ್ಮನ ಜೊತೆ ಗಲಾಟೆ! 80ಕ್ಕೂ ಹೆಚ್ಚು ಬಾರಿ ಇರಿದು ಕೊಂದ ಮಗ!

ಬೋರ್ಡ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ..! ಪ್ರಶ್ನಾಪತ್ರಿಕೆಯನ್ನು ವಾಟ್ಸಾಪ್ ಗ್ರೂಪ್ ಗಳಿಗೆ ಹಾಕಿದ್ಯಾರು..?