Uncategorized

ಆಟೋ ಎಕ್ಸ್ ಪೋ 2023 ವೇಳೆ ದುರಂತ, ವಿಡಿಯೊ ವೈರಲ್!

ನ್ಯೂಸ್ ನಾಟೌಟ್ : ಟೊಯೊಟಾ ಕಂಪನಿಯ ಅತಿ ದೊಡ್ಡ ಆಟೋ ಎಕ್ಸ್ ಪೋ 2023ರ ಕಾರ್ಯಕ್ರಮದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.

ಈ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಟೊಯೊಟಾ ಲ್ಯಾಂಡ್ ಕ್ರ್ಯೂಸರ್ 300 ಮೋಡಲ್ ಕಾರಿನ ಪ್ರದರ್ಶನದ ವೇಳೆ ಅದಕ್ಕಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಈ ಎಸ್ ಯು ವಿ ಮೋಡಲ್ ಜಪಾನ್ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಅತೀ ದುಬಾರಿ ಕಾರು ಇದಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರ್ಯನಿರತರಾದ ರಕ್ಷಣಾ ಸಿಬ್ಬಂದಿ ಭಾರಿ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಈ ಘಟನೆಯ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ದುಬಾರಿ ಟೊಯೊಟಾ ಕಾರು ನಿಲ್ಲಿಸಿದ್ದ ಮೇಲ್ಚಾವಣಿಯಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸಿದೆ. ತಾಂತ್ರಿಕ ತಜ್ಞರ ಪರಿಶೀಲನೆಯ ಬಳಿಕ ಈ ಘಟನೆಯು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಂಭವಿಸಿದೆ ಎನ್ನಲಾಗಿದೆ.

ಈ ಬಹುದೊಡ್ಡ ವಾಹನ ಪ್ರದರ್ಶನ ಕಾರ್ಯಕ್ರಮವಾದ ಆಟೋ ಎಕ್ಸ್ ಪೋ 2023 ಜನವರಿ 11 2023ರಂದು ಆರಂಭವಾಗಿದ್ದು ಯೋಜಿಸಿದಂತೆ ಜನವರಿ 18ಕ್ಕೆ ಕೊನೆಗೊಳ್ಳಲಿದೆ. ಮಾರುತಿ ಸುಜೂಕಿ, ಹುಂಡೈ, ಕೀಯಾ, ವೋಲ್ವೊ ಮುಂತಾದ ಕಂಪನಿಗಳು ಭಾಗವಹಿಸುತ್ತಿದ್ದು, ಇಲ್ಲಿ ಟೊಯೋಟ ಕಂಪನಿಯಿಂದ ಪ್ರದರ್ಶಿಸಲ್ಪಟ್ಟ ಲ್ಯಾಂಡ್ ಕ್ರ್ಯೂಸರ್ 300 ಮೋಡಲ್ ಕಾರಿನ ಬೆಲೆ ಬರೋಬ್ಬರಿ 2.17ಕೋಟಿ ರೂಪಾಯಿಗಳ ಮೌಲ್ಯ ಹೊಂದಿದೆ.

Related posts

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಇನ್ನಿಲ್ಲ

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಗೆ 53 ವರ್ಷವಾದರೂ ಇನ್ನೂ ಮದುವೆಯಾಗಿಲ್ಲ ಯಾಕೆ?ಇದಕ್ಕೆ ರಾಹುಲ್ ಗಾಂಧಿ ನೀಡಿದ ಉತ್ತರವೇನು?

ಎನ್ ಸಿಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರಕಾರ