Uncategorizedಜೀವನಶೈಲಿ

ಸೀರೆಯುಟ್ಟೇ ನಾರಿ ಜಿಮ್, ನೆಟ್ಟಿಗರ ಕಣ್ಣು ನೆಟ್ಟಗಾಗಿದ್ದು ಹೇಗೆ? ವಿಡಿಯೋ ವೈರಲ್

ನ್ಯೂಸ್ ನಾಟೌಟ್ : ಮಹಿಳೆಯರು ಸಮಾಜದ ಕಣ್ಣು ಅನ್ನುವ ಮಾತಿದೆ. ಇಂದು ಎಲ್ಲ ಕ್ಷೇತ್ರದಲ್ಲೂ ನಾರಿಯರು ನಾವು ಯಾರಿಗೂ ಕಮ್ಮಿ ಇಲ್ಲ ಅನ್ನುವುದನ್ನು ಸಾಧಿಸಿ ತೋರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸೀರೆಯುಟ್ಟೆ ಜಿಮ್ ಕೂಡ ಮಾಡಬಹುದು ಅನ್ನೋದನ್ನು ಇಲ್ಲೊಬ್ಬ ಮಹಿಳೆ ತೋರಿಸಿಕೊಟ್ಟಿದ್ದಾರೆ. ಡಬಲ್ಸ್‌ ಎತ್ತಿ, ವ್ಯಾಯಾಮಾ ಮಾಡಿ ಪವರ್ ತೋರಿಸಿ ಮೆರೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ರೀನಾ ಸಿಂಗ್ ಎಂಬ ಇನ್ಸ್ಟಾಗ್ರಾಂ ಬಳಕೆದಾರರಿಂದ ಈ ಕಿರು ಕ್ಲಿಪ್ ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿಲಾಗಿದೆ.  ಅವರು ನಿಯಮಿತವಾಗಿ ತನ್ನ ಖಾತೆಯಲ್ಲಿ ವ್ಯಾಯಾಮಕ್ಕೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡುತ್ತಿದ್ದು ಇದೀಗ ಆಕೆಯ ಎಲ್ಲ ವಿಡಿಯೋಗಳು ಕೂಡ ಜಾಲತಾಣದಲ್ಲಿ ವೀಕ್ಷಣೆಗೆ ಕಾರಣವಾಗಿದೆ.  ರೀನಾ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಅವರು ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ಕ್ಲಿಪ್ ನಲ್ಲಿ ಅವರು ಗುಲಾಬಿ ಬಣ್ಣದ ಸೀರೆಯನ್ನು ಧರಿಸಿ ವ್ಯಾಯಾಮ ಮಾಡುವುದನ್ನು ಕಾಣಬಹುದು. ಪುಶ್ ಅಪ್ ಗಳು  ಸೇರಿದಂತೆ ಅವರ ಸಂಪೂರ್ಣ ಫಿಟ್ನೆಸ್ ದಿನಚರಿಯನ್ನು ಸೀರೆಯಲ್ಲೇ ಮಾಡುತ್ತಾರೆ.

https://www.instagram.com/reel/Cm1nOhXPyQ8/?utm_source=ig_web_copy_link

935,000 ಕ್ಕೂ ಹೆಚ್ಚು ಲೈಕ್ ಗಳು ಮತ್ತು 33 ಮಿಲಿಯನ್ ವೀಕ್ಷಣೆಗಳನ್ನು ಈ ವಿಡಿಯೋ ಪಡೆದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ತಕ್ಷಣವೇ ಅವರ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಶ್ರೀಮತಿ ಸಿಂಗ್ ಅವರ ಸೃಜನಶೀಲ ವ್ಯಾಯಾಮದ ಉಡುಪುಗಳನ್ನು ಶ್ಲಾಘಿಸಿದರೆ, ಇತರರು ಉಡುಗೆಗಿಂತ ಸೀರೆಯಲ್ಲಿ ವ್ಯಾಯಾಮ ಮಾಡುವುದು ಸೂಕ್ತವೇ ಎಂದು ಪ್ರಶ್ನಿಸಿದ್ದಾರೆ.

Related posts

ವೈದ್ಯೆ ಕೈಹಿಡಿದ ಪಂಜಾಬ್ ಸಿಎಂ ಭಗವಂತ್ ಮಾನ್

ಸುಳ್ಯ: ಮಂಗಳೂರಿನಲ್ಲಿ ಪಾರ್ಕ್ ಮಾಡಿದ್ದ ಜಾಲ್ಸೂರಿನ ಮಹಿಳೆಯ ಸ್ಕೂಟಿ ನಾಪತ್ತೆ, ರಾತ್ರಿ ಇಟ್ಟದ್ದು ಬೆಳಗಾಗುವಾಗ ಮಂಗಮಾಯ..!

ಇರುವೆ ನೀನು ಎಲ್ಲಿರುವೆ? ಇರುವೆಗಳ ಉಪದ್ರ ಹೋಗಲಾಡಿಸಲು ಈ ಸಿಂಪಲ್ ಟಿಪ್ಸ್‌ ಫಾಲೋ ಮಾಡಿ