ಕರಾವಳಿ

ಬಿದ್ದು ಸಿಕ್ಕಿದ 10 ಸಾವಿರ ರೂ. ನಗದು ವಾಪಸ್‌

ನ್ಯೂಸ್ ನಾಟೌಟ್ : ರಸ್ತೆ ಬದಿ ಬಿದ್ದು ಸಿಕ್ಕಿದ ನಗದು ಸಹಿತ ಅಮೂಲ್ಯ ದಾಖಲೆ ಹೊಂದಿದ್ದ ಬ್ಯಾಗನ್ನು ವಾರಿಸುದಾರರಿಗೆ ಮರಳಿ ಒಪ್ಪಿಸಿದ ಮಾನವೀಯ ಘಟನೆಯೊಂದು ನೆಲ್ಯಾಡಿಯಿಂದ ವರದಿಯಾಗಿದೆ.
ಪರಾಬೆ ಗ್ರಾಮದ ನಿವಾಸಿ ಪ್ರವೀಣ್ ಕುಮಾರ್ ಎಂಬವರು ರಾಮನಗರಕ್ಕೆ ಬರುವ ವೇಳೆ ಮಾದೇರಿ ಜಾರಂಗೇಲ್ ಎಂಬಲ್ಲಿ ರಸ್ತೆ ಬದಿ ಬ್ಯಾಗೊಂದು ಬಿದ್ದು ಸಿಕ್ಕಿತ್ತು. ಬಳಿಕ ರಾಮನಗರದ ಆಶಾ ಕಾರ್ಯಕರ್ತೆ ಚಿತ್ರಾ ಅವರ ಮನೆಗೆ ಬ್ಯಾಗ್ ಕೊಂಡುಹೋಗಿ ಪರಿಶೀಲಿಸಿದ್ದರು. ಈ ವೇಳೆ ಬ್ಯಾಗ್ ನಲ್ಲಿ ಹತ್ತು ಸಾವಿರದ ಹತ್ತು ರೂಪಾಯಿ ನಗದು ಸಹಿತ ಪ್ರಮುಖ ದಾಖಲೆಗಳಿದ್ದವು. ದಾಖಲೆಯೊಂದರಲ್ಲಿ ಇದ್ದ ಮೊಬೈಲ್ ಸಂಖ್ಯೆ ಮೂಲಕ ಸಂಪರ್ಕಿಸಿದಾಗ ಮುಸ್ತಾಪ ಮೊರಂಕಲಾ ಎಂಬರದಾಗಿತ್ತು. ಬಳಿಕ ಮಾನವೀಯತೆ ಮೆರೆದ ಪ್ರವೀಣ್ ಕುಮಾರ್ ಹಾಗೂ ಆಶಾ ಕಾರ್ಯಕರ್ತೆ ಚಿತ್ರಾ ರಾಮನಗರ ಕೃತಜ್ಞತೆ ಸಲ್ಲಿಸಿ ಬ್ಯಾಗ್ ಪಡೆದುಕೊಂಡಿದ್ದಾರೆ.

Related posts

350 ವರ್ಷಗಳ ಬಳಿಕ ಛತ್ರಪತಿ ಶಿವಾಜಿಯ ‘ಹುಲಿ ಉಗುರು’ ಮರಳಿ ಭಾರತಕ್ಕೆ..! ಈ ಬಗ್ಗೆ ಅಸಲಿ – ನಕಲಿ ಎಂಬ ಚರ್ಚೆಯಾಗುತ್ತಿರುವುದೇಕೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಮಂಗಳಮುಖಿಯರು ಯುವಕನನ್ನು ಕಿಡ್ನಾಪ್ ಮಾಡಿದ್ದೇಕೆ..? ಆತನ ಮರ್ಮಾಂಗವನ್ನೇ ಕತ್ತರಿಸಿ ವಿಕೃತಿ ಮೆರೆಯಲು ಕಾರಣವೇನು? ಏನಿದು ಮಂಗಳಮುಖಿಯರ ಅಮಾನವೀಯ ಕೃತ್ಯ?

ಸುಳ್ಯ:ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ , ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು