ಕ್ರೈಂ

5 ರೂ. ನಾಣ್ಯ ನುಂಗಿದ ಮಗು ಸಾವು, ಚಿಕಿತ್ಸೆಗೆ ಸ್ಪಂದಿಸದೆ ಪ್ರಾಣ ಬಿಟ್ಟ ಖುಷಿ

ಮೈಸೂರು: ಐದು ರೂಪಾಯಿ ನಾಣ್ಯ ನುಂಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ. ಬಿಳಿಕೆರೆಯ ಆಯರ ಹಳ್ಳಿಯ ನಾಲ್ಕು ವರ್ಷದ ಮಗು ಖುಷಿ ಮೃತ ಬಾಲಕಿಯಾಗಿದ್ದಾಳೆ. ಈಕೆ ಮೈಸೂರಿನ ಹಿರಿಕ್ಯಾತನ ಹಳ್ಳಿಯ ಅಜ್ಜಿ ಮನೆಯಲ್ಲಿ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಐದು ರೂ. ನಾಣ್ಯವನ್ನು ನುಂಗಿದ್ದಾಳೆ. ತಕ್ಷಣ ಈಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಸಲಾಯಿತಾದರೂ ಆಕೆ ಬದುಕುಳಿಯಲಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿವೆ.

Related posts

ಕಾಸರಗೋಡು: ಕತ್ತಿಯಿಂದ ಪತ್ನಿ ಮೇಲೆ ಹಲ್ಲೆ! ರೊಚ್ಚಿಗೆದ್ದ ಪತ್ನಿಯಿಂದ ಪತಿಯ ಬರ್ಬರ ಕೊಲೆ!

6 ವರ್ಷದ ಬಾಲಕಿ ಮೇಲೆ ಭೀಕರ ಅತ್ಯಾಚಾರವೆಸಗಿ ಕೊಲೆಗೈದಿರುವ ಶಂಕೆ, ಭೀಕರತೆಯನ್ನು ಸಾರುತ್ತಿದೆ ಮೃತದೇಹ

ಬಸ್‌ ನಿಂದ ಕೆಳಗಿಳಿಸಿ ಪ್ರಯಾಣಿಕರ ಮೇಲೆ ಗುಂಡಿನ ದಾಳಿ..! ಭೀಕರ ದಾಳಿಯಲ್ಲಿ 23 ಜನ ಸಾವು..!