ಉಪ್ಪಿನಂಗಡಿ: ಇಲ್ಲಿನ ಸಿಟಿ ಲ್ಯಾಂಡ್ ಹೋಟೆಲ್ ಬಳಿ ಬುಲೆಟ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಉಪ್ಪಿನಂಗಡಿ ಬೈಪಾಸ್ ನಲ್ಲಿ ಸೋಮವಾರ ಭೀಕರ ಅಪಘಾತ ನಡೆದಿದೆ. ಬಾಲಕ ತನ್ನ ತಾಯಿಯ ಜತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ರಸ್ತೆಗೆ ಎಸೆಯಲ್ಪಟ್ಟು ಬಾಲಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಲ್ಲೇರಿ ರಿಕ್ಷಾ ಜಯಣ್ಣ ಅವರ ಮಗ ಅದ್ವಿತ್ ಮೃತಪಟ್ಟ ಬಾಲಕ ಎಂದು ತಿಳಿದು ಬಂದಿದೆ. ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.