ದೇಶ-ಪ್ರಪಂಚ

ಅಪ್ಪ ತೋಟಕ್ಕೆಂದು ತಂದ ಕೀಟನಾಶಕವನ್ನು ಜ್ಯೂಸ್ ಎಂದು ಕುಡಿದ ಕಂದಮ್ಮ,2 ವರ್ಷದ ಪುಟ್ಟ ಮಗು ದುರಂತ ಅಂತ್ಯ;ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ನ್ಯೂಸ್ ನಾಟೌಟ್ : ಈ ಮಗುವಿನ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ.. ಕೀಟನಾಶಕವನ್ನು ಜ್ಯೂಸ್ ಎಂದು ಕುಡಿದು ಪುಟ್ಟ ಕಂದಮ್ಮವೊಂದು ಬಾರದ ಲೋಕಕ್ಕೆ ತೆರಳಿದ ಘಟನೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ. ಯಶ್ವಿಕ್ (2) ದುರಂತ ಅಂತ್ಯ ಕಂಡ ಕಂದಮ್ಮ.

ಗ್ರಾಮದ ಪುಷ್ಪ ಹಾಗೂ ಹನುಮಂತ ಎಂಬ ದಂಪತಿ ಪುತ್ರನಾದ ಯಶ್ವಿಕ್, ತನ್ನ ಮನೆಯಲ್ಲಿದ್ದ ಕೀಟನಾಶಕವನ್ನು ಜ್ಯೂಸ್ ಎಂದು ತಿಳಿದು ಸೇವಿಸಿದೆ.ಕಂದಮ್ಮನ ತಂದೆ, ತನ್ನ ಬೆಳೆಗೆ ಕೀಟನಾಶಕವನ್ನು ಸಿಂಪಡಿಸಲು ದ್ರಾವಕವನ್ನು ತಂದಿದ್ದರು. ಬಾಕಿ ಉಳಿದಿದ್ದ ಔಷಧಿಯನ್ನು ಬಾಟಲಿಯೊಂದಕ್ಕೆ ಹಾಕಿ ಇಟ್ಟಿದ್ದರು. ಈ ವೇಳೆ ಈ ಬಾಟಲಿಯಲ್ಲಿ ಇರುವುದು ಜ್ಯೂಸ್ ಎಂದು ಭಾವಿಸಿದ ಮಗು ಕೀಟನಾಶಕವನ್ನು ಸೇವಿಸಿದೆ.

ಕೀಟನಾಶಕವನ್ನ ಕುಡಿದ ತಕ್ಷಣ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಗುವನ್ನು ಕೂಡಲೇ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಉಸಿರುಚೆಲ್ಲಿದೆ.ಪುಟ್ಟ ಕಂದಮ್ಮನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮಕ್ಕಳ ಮೇಲೆ ಯಾವತ್ತೂ ಒಂದು ಕಣ್ಣಿಟ್ಟಿರಬೇಕು.ಇಲ್ಲಾಂದ್ರೆ ಕಣ್ಣು ಮುಚ್ಚಿ ತೆರೆಯೋದ್ರೋಳಗೆ ಏನಾದರಂದು ಅವಾಂತರಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ.ಆದರೆ ಇನ್ನೂ ಕೆಲವೆಡೆ ದುರಂತಗಳು ನಡೆದಿದ್ದಾವೆ.ಮೊಬೈಲ್ ಚಾರ್ಜರ್ ಬಾಯಿಗಿಟ್ಟು ಮಕ್ಕಳು ದುರಂತ ಸಾವನ್ನಪ್ಪಿದರೆ,ಇನ್ನೂ ಕೆಲವು ಕಡೆ ಮಹಡಿಯಿಂದ ಬಿದ್ದು,ಬಕೆಟ್ ನೀರಿಗೆ ಬಿದ್ದು ಅಸುನೀಗಿರುವ ಘಟನೆಗಳು ಅದೆಷ್ಟೋ ನಡೆದಿದ್ದಾವೆ.

ಚಿಕ್ಕಮಕ್ಕಳಿರುವ ಪಾಲಕರು ಜಾಗರೂಕತೆಯಿಂದ ಇರಬೇಕಾಗಿರುವ ಅನಿವಾರ್ಯತೆಯಿದೆ.ಮನೆಯಲ್ಲಿ ಸಣ್ಣ-ಪುಟ್ಟ ವಸ್ತುಗಳನ್ನು ಮಕ್ಕಳ ಕೈಗೆ ಎಟುಕದಂತೆ ಇಡುವುದು ಒಳಿತು.ಸಾಧ್ಯವಾದಷ್ಟು ಮೊಬೈಲ್ ಗಳಿಂದ ದೂರವಿರೋದೇ ಒಳ್ಳೆದು.ಅಥವಾ ಮೊಬೈಲ್‌ಗಳನ್ನು ಚಾರ್ಜ್‌ಗಿಟ್ಟು ಚಾರ್ಜ್ ಆದ ಬಳಿಕ ಚಾರ್ಜರ್‌ಗಳನ್ನು ಪ್ಲಗ್‌ನಲ್ಲಿಯೇ ಇಡೋದು ತುಂಬಾ ಅಪಾಯಕಾರಿ.ಬಿಸಿನೀರು,ಕಸಕಡ್ಡಿ,ಜೋಕಾಲಿ ಮುಂತಾದ ಅಪಾಯಕಾರಿ ತಂದೊಡ್ಡುವ ಘಟನೆಗಳಿಂದ ಮಕ್ಕಳು ದೂರವಿರುವಂತೆ ಎಚ್ಚರವಹಿಸಿಕೊಳ್ಳುವುದು ಮುಖ್ಯವಾಗಿದೆ.

Related posts

30 ವರ್ಷದ ಮಹಿಳೆಯನ್ನು ಒಂದೇ ಕೈಯಲ್ಲಿ ಎತ್ತಿ ಆಡಿಸಿದ ಗ್ರೇಟ್‌ ಖಲಿ..! ಇಲ್ಲಿದೆ ವೈರಲ್ ವಿಡಿಯೋ

ರೈಲ್ವೆ ನಿಲ್ದಾಣದಲ್ಲಿ ಅಶ್ಲೀಲ ದೃಶ್ಯ ಪ್ರದರ್ಶನ ಪ್ರಕರಣ! ವಿಡಿಯೋ ನನ್ನದೆಂದ ನೀಲಿ ನಟಿ !

ಚುನಾವಣೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿ ಅಚ್ಚರಿಯ ಗೆಲುವು..! ನಾಮಪತ್ರ ಸಲ್ಲಿಸಿದ್ದ10 ಅಭ್ಯರ್ಥಿಗಳು ಏನಾದರು..?