ಕ್ರೈಂದೇಶ-ವಿದೇಶವೈರಲ್ ನ್ಯೂಸ್

181 ಜನ ಪ್ರಯಾಣಿಕರಿದ್ದ ವಿಮಾನ ಲ್ಯಾಂಡಿಂಗ್ ವೇಳೆ ಪತನ..! 29 ಮಂದಿ ಸಾವು..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್:181 ಜನ ಪ್ರಯಾಣಿಕರಿದ್ದ ವಿಮಾನ ಲ್ಯಾಂಡಿಂಗ್ ವೇಳೆ ಪತನಗೊಂಡ ಘಟನೆ ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 29 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಜಿಯೋಲ್ಲಾ ಪ್ರಾಂತ್ಯದಲ್ಲಿ ಈ ಅಪಘಾತ ಸಂಭವಿಸಿದೆ. ಜೆಜು ಏರ್ ಫ್ಲೈಟ್ 2216 ಥೈಲ್ಯಾಂಡ್‌ ನಿಂದ ಹಿಂದಿರುಗಿತ್ತು. ವಿಮಾನದಲ್ಲಿದ್ದ 181 ಜನರಲ್ಲಿ 175 ಮಂದಿ ಪ್ರಯಾಣಿಕರು ಮತ್ತು 6 ಮಂದಿ ವಿಮಾನ ಸಿಬ್ಬಂದಿ ಸೇರಿದ್ದಾರೆ. ಲ್ಯಾಂಡಿಂಗ್ ಗೇರ್‌ ಸಮಸ್ಯೆಯಿಂದ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲ್ಯಾಂಡಿಂಗ್ ವಿಫಲವಾದ ಬಳಿಕ ವಿಮಾನವು ನಿಲ್ದಾಣದ ತಡೆಗೋಡೆಗೆ ಅಪ್ಪಳಿಸಿದೆ. ಇದರಿಂದ ದೊಡ್ಡ ಸ್ಫೋಟ ಸಂಭವಿಸಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಕ್ಕಿಗಳಿಗೆ ವಿಮಾನ ಡಿಕ್ಕಿಯಾದ ಪರಿಣಾಮ ಲ್ಯಾಂಡಿಂಗ್ ಗೇರ್ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

Click

https://newsnotout.com/2024/12/women-nomore-fire-issue-husband-and-wife-conflict/

Related posts

11 ಬಾರಿ ಚುಚ್ಚಿ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯನ್ನು ಕೊಂದ ಫಯಾಜ್..! ಲವ್ ಜಿಹಾದ್ ಶಂಕೆ, ತೀವ್ರಗೊಂಡ ತನಿಖೆ

ಬಿಜೆಪಿಯಲ್ಲಿದ್ದಾಗ ಸಭೆಗಳಿಗೆ ಕಾರಣ ಹೇಳದೆ ದೂರುವಿಡುತ್ತಿದ್ದರು ಎಂದದ್ದೇಕೆ ಮುಖ್ಯಮಂತ್ರಿ ಚಂದ್ರು..? ಆರ್.ಎಸ್.ಎಸ್ ಕಚೇರಿಯಲ್ಲಿ ಗೂಳಿಹಟ್ಟಿ ಶೇಖರ್ ಗೆ ಆದ ಅನುಭವ ನನಗೂ ಆಗಿದೆ ಎಂದ್ರಾ ಎಎಪಿ ರಾಜ್ಯಾಧ್ಯಕ್ಷ?

HSRP ನಂಬರ್‌ ಪ್ಲೇಟ್‌ ಅಳವಡಿಕೆಗೆ ಮತ್ತೆ ದಿನಾಂಕ ವಿಸ್ತರಣೆ..! ಇದೀಗ 5ನೇ ಬಾರಿಗೆ ಗಡುವು ನೀಡಿದ ಸಾರಿಗೆ ಇಲಾಖೆ