ಕರಾವಳಿ

7 ಕೋಟಿ ಮೌಲ್ಯದ ಚಿನ್ನ ಸಾಗಿಸುತ್ತಿದ್ದ ದಾಖಲೆಯಿಲ್ಲದ ಟೆಂಪೋ ಪೊಲೀಸರ ವಶಕ್ಕೆ , ಶಿವಮೊಗ್ಗದಲ್ಲಿ 1.69 ಕೋಟಿ ನಗದು ಜಪ್ತಿ

ನ್ಯೂಸ್ ನಾಟೌಟ್ :ದಾಖಲೆ ಇಲ್ಲದ ಟಾಟಾ ಏಸ್ ನಲ್ಲಿ ಸಾಗಿಸುತ್ತಿದ್ದ  17 ಕೆ.ಜಿ. ಚಿನ್ನ ಹಾಗೂ ಬೆಳ್ಳಿಯನ್ನು ಪೊಲೀಸರು ಸೀಜ್ ಮಾಡಿರುವ ಘಟನೆ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ನಡೆದಿದೆ.17 ಕೆ.ಜಿ. ಚಿನ್ನ ಹಾಗೂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನದ ಮೌಲ್ಯ ಬರೋಬ್ಬರಿ 6 ಕೋಟಿ 44 ಲಕ್ಷ ರೂ. ಎನ್ನಲಾಗಿದೆ.

ಶಿವಮೊಗ್ಗ-ಚಿಕ್ಕಮಗಳೂರು ಗಡಿ‌ ಗ್ರಾಮವಾದ ಎಂ.ಸಿ.ಹಳ್ಳಿಯಲ್ಲಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಹಾಕಿರುವ ಚೆಕ್ ಪೋಸ್ಟ್ ನಲ್ಲಿ ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಶಿವಮೊಗ್ಗ ನಗರ‌ದ ಹೊರವಲಯದ ಅರಕೆರೆ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ವೇಳೇ 1.69 ಕೋಟಿ ನಗದು ಪತ್ತೆಯಾಗಿದ್ದು, ತುಂಗಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಶಿವಮೊಗ್ಗ ನಗರಕ್ಕೆ ಬ್ಯಾಂಕ್ ಗಳಿಗೆ ಹಣ ಸಾಗಿಸುವ ಮಾದರಿಯ ವಾಹನದಲ್ಲಿ ಭಾರಿ ಪ್ರಮಾಣದ ಹಣ ಪತ್ತೆಯಾಗಿದೆ. ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಪತ್ತೆಯಾದ ಹಣಕ್ಕೆ ಯಾವುದೇ ದಾಖಲಾತಿ ಇಲ್ಲದ ಕಾರಣಕ್ಕೆ ಹಣವನ್ನು ತುಂಗಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಸರ್ಪನಕಟ್ಟೆ ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 14 ಲಕ್ಷ ರೂಪಾಯಿ ಹಣ ಪತ್ತೆಯಾದ ಘಟನೆ ಸಂಭವಿಸಿದೆ. ಭಟ್ಕಳ ಮೂಲದ ಯಶ್ವಂತ್ ಗೊಂಡ, ಹೊನ್ನಾವರದ ಗುಣವಂತೆಯ ಶ್ರೀನಿವಾಸ್ ಗೌಡ, ರಘು ನಾಯ್ಕ ಎಂಬವರು ಇಕೋ ಕಾರಿನಲ್ಲಿ ಮುರ್ಡೇಶ್ವರಕ್ಕೆ ಹಣ ಕೊಂಡೊಯ್ಯುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಕಲಬುರಗಿಯ ಫರಹತ್ತಬಾದ್ ಚೆಕ್‌ಪೋಸ್ಟ್‌‌ನಲ್ಲಿ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 1 ಕೋಟಿ ಹಣವನ್ನು ಪೊಲೀಸರು ವಶಮಾಡಿದ್ದಾರೆ. ರವಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ.

Related posts

ಶಾಲಾ ವಾಹನಕ್ಕೆ ಬೈಕ್ ಡಿಕ್ಕಿ -ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು

ಮತ್ತೆರಡು ದಿನ ನೈಟ್ ಕರ್ಫ್ಯೂ ವಿಸ್ತರಣೆ

ಸುಳ್ಯ: ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆಗೈದ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು, ಆ ಒಂದು ಸುಳಿವು ಹಂತಕನ ಜನ್ಮ ಜಾಲಾಡಿತು..!