ಬೆಂಗಳೂರು: ಮಂತ್ರಿಗಳು ತಮ್ಮ ಕಾರಿನಲ್ಲಿ ರಸ್ತೆಯಲ್ಲಿ ತೆರಳುವ ವೇಳೆ ಝೀರೋ ಟ್ರಾಫಿಕ್ ಮಾಡುವುದು ಸಾಮಾನ್ಯ. ಇದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾದ ಹಲವು ಉದಾಹರಣೆಗಳಿವೆ. ಆದರೆ ನೂತನ ಸಚಿವ ಆರಗ ಜ್ಞಾನೇಂದ್ರ ಅವರು ತಾನು ಸಂಚರಿಸುವ ದಾರಿಯಲ್ಲಿ ಝೀರೋ ಟ್ರಾಫಿಕ್ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನನಗೆ ಯಾವುದೇ ವಿಶೇಷ ವ್ಯವಸ್ಥೆ ಬೇಡ. ಎಲ್ಲರಂತೆ ನಾನಿರುತ್ತೇನೆ. ಮುಖ್ಯಮಂತ್ರಿಗಳಿಗೆ ಮಾತ್ರ ಝೀರೋ ಟ್ರಾಫಿಕ್ ವ್ಯವಸ್ಥೆ ಇರುತ್ತದೆ. ಆದರೆ ಮಂತ್ರಿಗಳಿಗೆ ಇರುವುದಿಲ್ಲ. ಆದರೆ ಕೆಲವು ಸಚಿವರು ಝೀರೋ ಟ್ರಾಫಿಕ್ ಮಾಡಿಕೊಂಡು ಹೋಗುತ್ತಾರೆ. ಇದರಿಂದ ಜನರಿಗೆ ಅನಗತ್ಯ ತೊಂದರೆಯಾಗುತ್ತದೆ ಎಂದು ಜ್ಞಾನೇಂದ್ರ ತಿಳಿಸಿದರು.