ದೇಶ-ವಿದೇಶವೈರಲ್ ನ್ಯೂಸ್

ಒಂದೂವರೆ ತಿಂಗಳಲ್ಲಿ ಏಳು ಬಾರಿ ಹಾವಿನಿಂದ ಕಚ್ಚಿಸಿಕೊಂಡ ಯುವಕ..! , ಅಷ್ಟ್ಕಕ್ಕೂ ಹಾವಿಗೆ ಯುವಕನ ಮೇಲೆ ಯಾಕೆ ದ್ವೇಷ..?

ನ್ಯೂಸ್‌ ನಾಟೌಟ್‌: ಹಾವಿನ ದ್ವೇಷ ಹನ್ನೆರಡು ವರುಷ ಎಂಬ ಮಾತು ನಿಜವೋ..? ಸುಳ್ಳೋ..? ಹಾವಿನ ಮೇಲೆ ಯಾರಾದರು ದಾಳಿ ಮಾಡಿದರೆ ಅವುಗಳು ನೆನಪಿನಲ್ಲಿಟ್ಟುಕೊಂಡು ಹಗೆ ಸಾಧಿಸುತ್ತವೆ ಎಂಬುವುದು ಕೆಲವರ ನಂಬಿಕೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಯುವಕನೊಬ್ಬನಿಗೆ ಏಳು ಬಾರಿ ಹಾವು ಕಚ್ಚಿರುವ ಘಟನೆಯೊಂದು ಉತ್ತರಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ.

ಯುವಕನನ್ನು ಉತ್ತರಪ್ರದೇಶ ಜಿಲ್ಲೆಯ ಸೌರಾ ಗ್ರಾಮದ ನಿವಾಸಿ ವಿಕಾಸ್ ದುಬೆ ಎಂದು ಗುರುತಿಸಲಾಗಿದೆ. ಈತ ಕಳೆದ ಒಂದೂವರೆ ತಿಂಗಳಲ್ಲಿ ಏಳು ಬಾರಿ ಹಾವಿನಿಂದ ಕಚ್ಚಿಸಿಕೊಂಡರೂ ಬದುಕಿದ್ದಾನೆ. ಇದೀಗ ಏಳನೇ ಬಾರಿ ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಇಷ್ಟು ಬಾರಿ ಹಾವು ಕಚ್ಚಿದರೂ ಆತನ ಅದೃಷ್ಟ ಚೆನ್ನಾಗಿತ್ತು. ಇದಕ್ಕೆ ಈತನಿಗೆ ಚಿಕಿತ್ಸೆ ನೀಡುವ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವಿಕಾಸ್ ದುಬೆಗೆ ಜೂನ್‌ 2ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಚ್ಚಿತ್ತು. ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ಬಂದಿದ್ದ. ಜೂನ್‌ 10ರಂದು ಮತ್ತೆ ಎರಡನೇ ಬಾರಿ ಹಾವು ಕಚ್ಚಿದೆ. ಈ ವೇಳೆಯೂ ಅದೇ ಆಸ್ಪತ್ರೆಗೆ ತೆರಳಿ ಅದೇ ವೈದ್ಯರ ಬಳಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದಾನೆ. ಬಳಿಕ ಹಾವು ಕಂಡಾಗ ಭಯಪಡುತ್ತಿದ್ದ ಎನ್ನಲಾಗಿದೆ. ಜೂನ್‌ 17ರಂದು ಮತ್ತೆ ಹಾವಿನ ದಾಳಿಗೊಳಗಾಗಿದ್ದಾನೆ. ಈ ವೇಳೆ ಆತ ಗಾಬರಿಗೊಂಡಿದ್ದರಿಂದ ಮೂರ್ಛೆ ಕೂಡ ಹೋಗಿದ್ದ ಎನ್ನಲಾಗಿದೆ ಆದರೂ ಹಿಂದೆ ಚಿಕಿತ್ಸೆ ನೀಡಿದ ವೈದ್ಯರೇ ಚಿಕಿತ್ಸೆ ನೀಡಿ ಗುಣಮುಖನಾಗಿ ಮನೆಗೆ ಬಂದಿದ್ದಾನೆ. ಇದಾಗಿ ಕೆಲ ದಿನಗಳು ಬಿಟ್ಟು ನಾಲ್ಕನೇ ಬರಿ ಹಾವಿನ ಕಡಿತಕ್ಕೊಳಗಾದಾಗ ಮನೆಯವರು ಮತ್ತೆ ಆತನನ್ನು ಅದೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಇದನ್ನು ಕಂಡು ಗಾಬರಿಗೊಂಡ ವೈದ್ಯರು, ಸ್ವಲ್ಪ ಸಮಯ ಊರು ಬಿಟ್ಟು ಬೇರೆ ಕಡೆ ಇರುವಂತೆ ದುಬೆಗೆ ಸಲಹೆ ನೀಡಿದ್ದಾರೆ. ಅದರಂತೆ ಆಸ್ಪತ್ರೆಯಿಂದ ಬಿಡುಗಡೆಗೊಂಡ ದುಬೆ ತನ್ನ ಮನೆ ಬಿಟ್ಟು ಫತೇಹ್‌ ಪುರ್‌ ನ ರಾಧಾ ನಗರದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಇರಲು ನಿರ್ಧರಿಸಿ ಅಲ್ಲಿಗೆ ತೆರಳಿದ್ದಾನೆ. ಆದರೆ ಆತನ ಅದೃಷ್ಟ ಸರಿ ಇರಲಿಲ್ಲ. ಅಲ್ಲಿಯೂ ಹಾವಿನ ದಾಳಿಗೆ ಒಳಗಾಗಿದ್ದಾನೆ ಮತ್ತೆ ಪೋಷಕರು ಆತನನ್ನು ತನ್ನ ಊರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದೀಗ ಏಳನೇ ಬಾರಿ ಹಾವು ಕಚ್ಚಿದ ಪರಿಣಾಮ ದುಬೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

Related posts

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ, ಪತ್ನಿ ಸಮೇತ ದೇಗುಲದಲ್ಲಿ ಮಹಾಪೂಜೆ

ಸೈಫ್‌ ಮೇಲೆ ಹಲ್ಲೆ ಮಾಡಿದವ ಅರೆಸ್ಟ್..! ಹೆಸರು ಬದಲಿಸಿಕೊಂಡಿದ್ದ ಆರೋಪಿ ಬಾಂಗ್ಲಾ ಪ್ರಜೆ ಎಂದ ಮುಂಬೈ ಪೊಲೀಸ್‌..!

ಕನ್ನಡ ರಾಜ್ಯೋತ್ಸವದ ದಿನ ಮರಾಠರು ಕರಾಳ ದಿನ ಆಚರಿಸುತ್ತಿರುವುದೇಕೆ? ಮುಂಬೈ – ಕರ್ನಾಟಕ ಸರ್ಕಾರಿ ಸಾರಿಗೆ ರದ್ದು ಯಾಕೆ? ಇಲ್ಲಿದೆ ಸಂಪೂರ್ಣ ಮಾಹಿತಿ