ಕರಾವಳಿಸುಳ್ಯ

‘ಯೋಗಿ’ ನೋಡಲು ಬಂದ ‘ಬಾಲ ಯೋಗಿ’, ಕಾರ್ಕಳದಲ್ಲಿ ಗಮನ ಸೆಳೆದ ಜೂನಿಯರ್ ಯೋಗಿ ಆದಿತ್ಯನಾಥ್

ಚಿತ್ರ-ವರದಿ: ಶ್ರೀಜಿತ್ ಸಂಪಾಜೆ

ನ್ಯೂಸ್ ನಾಟೌಟ್ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರಾವಳಿಗೆ ಕಾಲಿಡುತ್ತಿದ್ದಂತೆ ಕಮಲ ಪಾಳಯದಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ಎತ್ತ ನೋಡಿದರತ್ತ ಕೇಸರಿಯ ರಂಗಿನ ಜತೆ ಯೋಗಿ ಆದಿತ್ಯನಾಥ್ ಫೋಟೋ ಕೂಡ ರಾರಾಜಿಸುತ್ತಿದೆ. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದು ಬಿರು ಬಿಸಿಲನ್ನೂ ಲೆಕ್ಕಿಸದೆ ಯೋಗಿಯ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕಾರ್ಕಳದಲ್ಲಿ ಪುಟ್ಟ ಬಾಲಕಿಯೊಬ್ಬಳು ಯೋಗಿಯ ಧಿರಿಸಿನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಳು. ಕಾವಿ ಬಟ್ಟೆಯಲ್ಲಿ ಸದಾ ವಿರಾಜಮಾನರಾಗಿ ಕಾಣುವ ಯೋಗಿ ಆದಿತ್ಯನಾಥ್‌ ರಂತೆಯೇ ಪುಟ್ಟ ಬಾಲಕಿ ಕೂಡ ನೆರೆದಿದ್ದ ಜನರ ಗಮನ ಸೆಳೆದಳು.

ಗಮನ ಸೆಳೆದ ಬಾಲಯೋಗಿ

Related posts

ಬೆಂಗಳೂರಿನಲ್ಲಿರುವ ತುಳುವರಿಗಾಗಿ ‘ಬೆಂಗಳೂರು ತುಳುವಾಸ್‌’ ; ‘ಮೀಟ್‌ ಅಪ್‌’ ನಲ್ಲಿ ಸಂಭ್ರಮಿಸಿದ ತುಳುವರು,ಏನಿದು ವಿನೂತನ ಕಾರ್ಯಕ್ರಮ?

ನಾ ಕಂಡಂತೆ ಪೂಜ್ಯ ಡಾ. ಕೆ.ವಿ.ಜಿ ಯವರು.

ಕಲ್ಲುಗುಂಡಿ: ಯಶಸ್ವಿ ಯುವಕ ಮಂಡಲ ವತಿಯಿಂದ SSLC ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಗೂನಡ್ಕದಲ್ಲಿ ಸಂಭ್ರಮದ ಶಾಲಾ ಸ್ವಾತಂತ್ರ್ಯೋತ್ಸವ