ನ್ಯೂಸ್ ನಾಟೌಟ್: ಮಣ್ಣು ತುಂಬಿಸಿಕೊಂಡು ಹೋಗುತ್ತಿದ್ದ ಬೃಹತ್ ಲಾರಿಯೊಂದು ಹಠಾತ್ ಬ್ರೇಕ್ ಫೇಲ್ ಗೆ ಒಳಗಾಗಿ ರಸ್ತೆ ಬದಿಯ ಅಂಗಡಿ, ಖಾಸಗಿ ಬಸ್, ಲಾರಿ ಮತ್ತು ಹಲವು ವಾಹನಗಳಿಗೆ ಗುದ್ದಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಭಾರೀ ಅವಘಡ ತಪ್ಪಿ ಹೋಗಿದೆ.
ಮಂಗಳೂರು- ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಈ ಅವಘಡ ನಡೆದಿದೆ. ಬ್ರೇಕ್ ಫೇಲ್ ಆದ ಲಾರಿಯ ಚಾಲಕ ಮತ್ತು ಮತ್ತೊಂದು ಲಾರಿಯ ಚಾಲಕ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಕಟ್ಟಡಕ್ಕೆ ಗುದ್ದಿದ ಪರಿಣಾಮ ಮೂರು ಅಂಗಡಿಗಳಿಗೆ ಭಾರಿ ಹಾನಿಯಾಗಿದೆ. ಲಾರಿ, ಖಾಸಗಿ ಬಸ್ ಜಖಂ ಗೊಂಡಿದೆ. ರಸ್ತೆಬದಿಯಲ್ಲಿ ನಿಲ್ಲಿಸಿದ್ದ ನಾಲ್ಕು ಸ್ಕೂಟರ್ ಗಳು ಜಖಂಗೊಂಡಿದೆ. ಸ್ಥಳಕ್ಕೆ ಬಜ್ಪೆ ಠಾಣಾ ಪೊಲೀಸರು ದೌಡಾಯಿಸಿದ್ದಾರೆ.