ದೇಶ-ಪ್ರಪಂಚ

ತಡರಾತ್ರಿ ಪ್ರಬಲ ಭೂಕಂಪ..! 132ಕ್ಕೂ ಅಧಿಕ ಮಂದಿ ದುರಂತ ಅಂತ್ಯ

ನ್ಯೂಸ್ ನಾಟೌಟ್ : ನೇಪಾಳದ ಪಶ್ಚಿಮ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿ ಸುಮಾರು 132ಕ್ಕೂ ಅಧಿಕ ಜನರು ದುರಂತ ಅಂತ್ಯ ಕಂಡಿರುವ ಘಟನೆ ವರದಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಶುಕ್ರವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.

ಭೂಕಂಪದ ಕೇಂದ್ರಬಿಂದು 10 ಕಿ.ಮೀ ಆಳದಲ್ಲಿದೆ ಎಂದು ‌ಭೂಕಂಪನದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.’ರುಕುಮ್ ವೆಸ್ಟ್‌ನಲ್ಲಿ ಕನಿಷ್ಠ 36 ಜನರು ಹಾಗೂ ಜಾಜರ್‌ಕೋಟ್‌ನಲ್ಲಿ 34 ಮಂದಿ ಉಸಿರು ಚೆಲ್ಲಿದ್ದಾರೆ. ‘ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುರ್ಖೇತ್‌ಗೆ ಕಳುಹಿಸಲಾಗಿದೆ’ ಎಂದು ಜಾಜರ್‌ಕೋಟ್‌ನ ಮುಖ್ಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

‘ಭೂಕಂಪದಿಂದ ಉಂಟಾದ ಜೀವ ಮತ್ತು ವಸ್ತು ಹಾನಿಯ ಬಗ್ಗೆ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ತೀವ್ರ ಸಂತಾಪ ಸೂಚಿಸಿದ್ದಾರೆ.ಈ ಸಂದರ್ಭ ರಕ್ಷಣಾ ಕಾರ್ಯಾಚರಣೆ ಹಾಗೂ ತುರ್ತು ಪರಿಹಾರಕ್ಕಾಗಿ ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ’ ಎಂದು ನೇಪಾಳದ ಪಿಎಂಒ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ದೆಹಲಿಯಲ್ಲೂ ಕಂಪನ: ನೇಪಾಳದಲ್ಲಿ ಭೂಕಂಪ ಸಂಭವಿಸಿದ ವೇಳೆ ದೆಹಲಿಯ ಕೆಲವು ಕಡೆಗಳಲ್ಲಿ ಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ.ಎನ್‌ಸಿಆರ್, ಉತ್ತರ ಪ್ರದೇಶ ಹಾಗೂ ಬಿಹಾರ ಸೇರಿದಂತೆ ಉತ್ತರ ಭಾರತದ ಹಲವು ಜಿಲ್ಲೆಗಳಲ್ಲಿಯೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.

Related posts

IND vs WI 1st Test: ನಾಳೆಯಿಂದ (ಜು.12) ರೋಹಿತ್ ಪಡೆಗೆ ಆತಿಥೇಯ ವಿಂಡೀಸ್ ಎದುರಾಳಿ, ಕಠಿಣ ಅಭ್ಯಾಸಕ್ಕಿಳಿದ ಟೀಂ ಇಂಡಿಯಾದ ವಿಡಿಯೋ ವೈರಲ್

ಮುಖದ ಮೇಲಿನ ಕೂದಲು ನೋಡಿ ಡಿವೋರ್ಸ್ ಕೊಟ್ಟ ಗಂಡ! ನೊಂದ ಆಕೆ ಪುರುಷನಾಗಿ ಬದಲಾಗಿದ್ದು ಹೇಗೆ?

ವಾಟ್ಸಪ್ ಬಳಕೆದಾರರೆ ನಿಮ್ಮ ಖಾತೆ ನಿಷೇಧವಾಗದಂತೆ ನೋಡಿಕೊಳ್ಳುವುದು ಹೇಗೆ?