ಕ್ರೈಂರಾಜ್ಯವಿಡಿಯೋವೈರಲ್ ನ್ಯೂಸ್

ಶೈಕ್ಷಣಿಕ ಪ್ರವಾಸದ ವೇಳೆ ಬಸ್ ಚಲಾಯಿಸಿದ ಸರ್ಕಾರಿ ಶಾಲಾ ಶಿಕ್ಷಕ..! ಅಮಾನತ್ತು ಆದೇಶ ಹಿಂಡೆಯುವಂತೆ ವಿದ್ಯಾರ್ಥಿಗಳ ಆಗ್ರಹ..!

1

ನ್ಯೂಸ್ ನಾಟೌಟ್: ಶೈಕ್ಷಣಿಕ ಪ್ರವಾಸದ ವೇಳೆ ಬಸ್ ಚಲಾಯಿಸಿದ ಗುಂಬಳ್ಳಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ವೀರಭದ್ರಸ್ವಾಮಿಯನ್ನು ಅಮಾನತ್ತು ಮಾಡಲಾಗಿದೆ.

ಚಾಲಕನ ಬದಲು ಶಿಕ್ಷಕ ವೀರಭದ್ರಸ್ವಾಮಿ ತಾವೇ ಬಸ್ ಚಲಾಯಿಸಿದ್ದರು. ಶಾಲಾ ಶಿಕ್ಷಕ ಬಸ್ ಚಲಾಯಿಸುವ ವಿಡಿಯೋ ವೈರಲ್ ಆಗಿತ್ತು.

ಸಾರ್ವಜನಿಕರ ದೂರಿನ ಮೇರೆಗೆ ಸೇವಾ ನಡತೆ ಉಲ್ಲಂಘನೆ ಆರೋಪದಡಿ ವೀರಭದ್ರಸ್ವಾಮಿ ಅವರನ್ನು ಅಮಾನತ್ತುಗೊಳಿಸಿ ಡಿಡಿಪಿಐ ರಾಮಚಂದ್ರರಾಜೇ ಅರಸ್ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಶಾಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಕನ ಪರ ಪ್ರತಿಭಟನೆ ನಡೆಸಿದ್ದಾರೆ. ಅಮಾನತ್ತು ಆದೇಶವನ್ನು ಹಿಂಪಡೆಯುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.