ಕರಾವಳಿ

ಪುತ್ತೂರಿನಲ್ಲಿ ಬಸ್‌ನೊಳಗೆ ಕಳ್ಳಿಯ ಕೈಚಳಕ

ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಬಸ್‌, ರೈಲಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲೂ ಇಂತಹುದೇ ಘಟನೆ ನಡೆದಿದೆ.

ಖಾಸಗಿ ಬಸ್‌ನಲ್ಲಿ ಪುತ್ತೂರಿಗೆ ಬರುತ್ತಿದ್ದ ಮಹಿಳಾ ಅಧಿಕಾರಿಯೊಬ್ಬರ  ಪರ್ಸ್ ಅನ್ನು ಸಹ ಪ್ರಯಾಣಿಕೆಯಾಗಿದ್ದ ಮಹಿಳೆಯೊಬ್ಬಳು ಕಳವು ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳವು ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಾಗಿದ್ದು  ಕಳ್ಳಿಯೂ ಮಂಗಳೂರಿನ ಪಡೀಲ್‌ನಲ್ಲಿ ಪತ್ತೆಯಾಗಿದ್ದಾಳೆ.

ಪುತ್ತೂರು ತಾ.ಪಂ ಯೋಜನಾಧಿಕಾರಿ ಸುಕನ್ಯ ಅವರು ಮಂಗಳೂರಿನಿಂದ ಪುತ್ತೂರಿಗೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರ ಪರ್ಸ್ ಕಳೆದು ಹೋಗಿತ್ತು. ಈ ಕುರಿತು ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪರ್ಸ್ ಅನ್ನು ಕಳವು ಮಾಡುವ ದೃಶ್ಯ ಬಸ್‌ನಲ್ಲಿದ್ದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದಲ್ಲದೆ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Related posts

ರಾಜ್ಯದ ಬಸ್ ಗಳಿಗೆ ಮಸಿ ಬಳಿದ ಮಹಾರಾಷ್ಟ್ರದ ಪುಂಡರು

ಬಿಜೆಪಿಗೆ ಪರ್ಯಾಯವಾಗಿ ಹಿಂದೂಗಳ ಪ್ರತ್ಯೇಕ ಪಕ್ಷ ಬೇಕಾ? ಬೇಡ್ವಾ?

ಕುಕ್ಕರ್‌ ಬಾಂಬ್‌ ಸ್ಫೋಟದ ಸಂತ್ರಸ್ತ ಪುರುಷೋತ್ತಮ ಪೂಜಾರಿಗೆ ನವೀಕೃತ ಮನೆ ಹಸ್ತಾಂತರ