ದೇಶ-ವಿದೇಶ

ಅಟಲ್‌ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ..! ಮಹಿಳೆ ಬಚಾವ್‌ ಆಗಿದ್ದು ಹೇಗೆ..? ವಿಡಿಯೋ ವೀಕ್ಷಿಸಿ..

ನ್ಯೂಸ್‌ ನಾಟೌಟ್‌: ಮುಂಬೈನ ಅಟಲ್ ಸೇತುವೆ ಮೇಲಿಂದ ಮಹಿಳೆಯೊಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಶುಕ್ರವಾರ (ಆಗಸ್ಟ್ 16) ನಡೆದಿದೆ. ಆದರೆ ಕ್ಯಾಬ್ ಚಾಲಕ ಮತ್ತು ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಸಮಯಪಜ್ಞೆಯಿಂದ ಮಹಿಳೆ ಪಾರಾಗಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರೀಮಾ ಮುಖೇಶ್ ಪಟೇಲ್ (56 ವರ್ಷ) ಎಂದು ಗುರುತಿಸಲಾಗಿದ್ದು, ಈಕೆ ಮುಂಬೈನ ಈಶಾನ್ಯ ಭಾಗದಲ್ಲಿರುವ ಮುಲುಂಡ್‌ನ ಉಪನಗರ ನಿವಾಸಿಯಾಗಿದ್ದಾರೆ.

ಶುಕ್ರವಾರ ಸಂಜೆ ಬಾಡಿಗೆ ಕಾರು ಗೊತ್ತುಪಡಿಸಿ ಅಟಲ್ ಸೇತುವೆ ಮಧ್ಯೆ ಕಾರು ನಿಲ್ಲಿಸಿ ಸೇತುವೆಯ ತಡೆಗೋಡೆ ಹತ್ತಿದ ಮಹಿಳೆ ಹಾರಲು ಯತ್ನಿಸಿದ್ದಾರೆ. ಈ ವೇಳೆ ಸಮಯಪ್ರಜ್ಞೆ ಮೆರೆದ ಕಾರು ಚಾಲಕ ಮಹಿಳೆಯ ಕೂದಲು ಹಿಡಿದು ರಕ್ಷಣೆಗೆ ಮುಂದಾಗಿದ್ದಾರೆ. ಅದೇ ಸಮಯಕ್ಕೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಂಚಾರಿ ಪೊಲೀಸರು ಕೂಡಲೇ ಮಹಿಳೆಯ ರಕ್ಷಣೆಗೆ ಕೈಜೋಡಿಸಿದ್ದಾರೆ, ಕೆಲ ಹೊತ್ತು ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದ್ದಾರೆ. ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Related posts

ಕೊಡಗು: ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆ..! ದೇಗುಲದ ಮೆಟ್ಟಿಲ ವರೆಗೆ ಆವರಿಸಿದ ನೀರು..!

ಚಿನ್ನ-ಬೆಳ್ಳಿ, ಮೊಬೈಲ್‌ ಫೋನ್, ಚಾರ್ಜರ್‌ಗಳ ಬೆಲೆ ಇಳಿಕೆ..! ಶೈಕ್ಷಣಿಕ ಸಾಲದ ಬಡ್ಡಿದರ ಇಳಿಕೆ..!

ಶಾಲೆ, ಕೆಫೆ ಆಯ್ತು ಈಗ ಕೇಂದ್ರ ಗೃಹ ಸಚಿವಾಲಯಕ್ಕೇ ಬಾಂಬ್ ಬೆದರಿಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ