ಕೊಡಗು

ಕಿಡ್ನಿ ವೈಫಲ್ಯದಿಂದ ನರಳುತ್ತಿರುವ ಮಹಿಳೆಗೆ ನೆರವಾಗಿ

ನ್ಯೂಸ್ ನಾಟೌಟ್: ಸಂಪಾಜೆಯ ಮಹಿಳೆಯೊಬ್ಬರು ತೀವ್ರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಿಶೋರ್ ಕುವ್ವೆಕಾಡು ಎಂಬುವವರ ಪತ್ನಿ ಎಂದು ತಿಳಿದು ಬಂದಿದೆ. ಆಕೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಸೆಣಸಾಟ ನಡೆಸುತ್ತಿದ್ದಾರೆ. ಏನೂ ಅರಿಯದ ಇಬ್ಬರು ಪುಟ್ಟ ಮಕ್ಕಳು (ಮೂರು ಮತ್ತು ನಾಲ್ಕು ವರ್ಷದ ಗಂಡು ಮಕ್ಕಳು) ತಾಯಿಯ ಪಕ್ಕದಲ್ಲಿ ಕುಳಿತು ಕಣ್ಣೀರಿಡುತ್ತಿವೆ. ಈ ದೃಶ್ಯ ನೋಡಿದ ಎಂತಹ ಕಲ್ಲು ಹೃದಯಕ್ಕೂ ಕರುಳು ಹಿಂಡಿದ ಅನುಭವ ಆಗುತ್ತೆ. ಮನೆಯವರು ಈಗಾಗಲೇ ಆಕೆಯನ್ನು ಉಳಿಸಿಕೊಳ್ಳಲು 2 ಲಕ್ಷ ರೂ. ಖರ್ಚು ಮಾಡಿದ್ದಾರೆ. ಸ್ವಲ್ಪ ಚೇತರಿಸಿಕೊಂಡಿದ್ದ ಆಕೆ ಇದೀಗ ಕಳೆದ 5 ದಿನಗಳಿಂದ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಮುಂದಿನ ಚಿಕಿತ್ಸೆಗೆ 3 ರಿಂದ 4ಲಕ್ಷ ರೂ ಖರ್ಚು ಆಗುತ್ತದೆ ಎಂದು ಡಾಕ್ಟರ್ ಹೇಳಿರುತ್ತಾರೆ. ಆರ್ಥಿಕವಾಗಿ ಬಹಳಷ್ಟು ಕಷ್ಟದಲ್ಲಿರುವ ಕುಟುಂಬಕ್ಕೆ ಮುಂದಿನ ಚಿಕಿತ್ಸೆ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಹೃದಯ ಓದುಗ ಬಳಗದಲ್ಲಿ ನೆರವನ್ನು ಯಾಚಿಸಿದ್ದಾರೆ. ಮಾನವೀಯ ನೆಲೆಯಲ್ಲಿ ಆಕೆಯ ಚಿಕಿತ್ಸೆಗೆ ನೆರವಾಗಿ ನಿಮ್ಮ ಕೈಯಿಂದ ಆದ ಸಹಾಯವನ್ನು ಮಾಡಬೇಕಾಗಿ ಸಮಸ್ತ ‘ನ್ಯೂಸ್ ನಾಟೌಟ್ ‘ಓದುಗರಲ್ಲಿ ನಾವು ಮನವಿ ಮಾಡುತ್ತಿದ್ದೇವೆ. ಸಹಾಯ ಮಾಡಿದವರು ನ್ಯೂಸ್ ನಾಟೌಟ್ ಗಮನಕ್ಕೆ ತಂದು ಸಹಾಯ ಮಾಡಿದರೆ ಆ ಕುಟುಂಬಕ್ಕೆ ಒಟ್ಟು ಎಷ್ಟು ಹಣ ಸಂದಾಯವಾಗಿದೆ ಅನ್ನುವುದನ್ನು ಮುಂದೆ ಪ್ರಕಟಿಸಲು ಸಾಧ್ಯವಾಗುತ್ತದೆ.

ಹೆಸರು: K.C.Ravichandra, ಬ್ಯಾಂಕ್: ಕೆನರಾ ಬ್ಯಾಂಕ್ ಖಾತೆ ಸಂಖ್ಯೆ :110040683497, ಐ.ಎಫ್.ಎಸ್.ಸಿ: CNRB0000643, ಫೋನ್ ನಂ: 9740065649 (ಫೋನ್ ಪೇ)

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಶಬರೀಶ ಕುದ್ಕುಳಿ -974 162 6234

Related posts

ಕಡಬ: ಆಡು ನುಂಗಲಾಗದೆ ಒದ್ದಾಡಿದ ಹೆಬ್ಬಾವು..! 1 ಗಂಟೆ ನುಂಗುವ ಯತ್ನ ನಡೆಸಿ ಕೊನೆಗೆ ಮಾಡಿದ್ದೇನು ಗೊತ್ತಾ?

ಲೈಂಗಿಕ ದೌರ್ಜನ್ಯ: ಇಂದು ಮುರುಘಾಶ್ರೀ ಬಂಧನ ಆಗುವ ಸಾಧ್ಯತೆ

ಸುಳ್ಯವನ್ನು ಬೆಚ್ಚಿಬೀಳಿಸಿದ್ದ ಕಲ್ಲುಗುಂಡಿ ಸಂಪತ್ ಕೊಲೆ ಪ್ರಕರಣ,ಮೂರನೇ ಆರೋಪಿಗೆ ಷರತ್ತು ಬದ್ಧ ಜಾಮೀನು