ದೇಶ-ಪ್ರಪಂಚ

ಗಾಢ ನಿದ್ರೆಯಲ್ಲಿ ಮಹಿಳೆ ಕಾಲಿಗೆ ಸುತ್ತಿಕೊಂಡಿತ್ತು ಕಾಳಿಂಗ ಸರ್ಪ..!ಎಚ್ಚರಗೊಂಡು ಮೂರು ಗಂಟೆಗಳ ಕಾಲ ಮಹಿಳೆ ಮಾಡಿದ್ದೇನು?

ನ್ಯೂಸ್ ನಾಟೌಟ್: ಹಾವುಗಳೆಂದರೆ ಸಾಕು.. ಮಾರುದ್ದ ಒಡೋರೇ ಹೆಚ್ಚು. ಅದರಲ್ಲೂ ವಿಷಪೂರಿತ ಹಾವೆಂದರೆ ಹೃದಯವೇ ನಿಂತು ಹೋಗುವಷ್ಟು ಆತಂಕವಾಗುತ್ತೆ. ಆದರೆ ಇಲ್ಲೊಬ್ಬಳು ಮಹಿಳೆಯ ಧೈರ್ಯವನ್ನು ಮೆಚ್ಚಿಕೊಳ್ಳಲೇ ಬೇಕು.ರಾತ್ರಿ ನಿದ್ದೆ ಮಾಡಿದ್ದ ಮಹಿಳೆಯೊಬ್ಬರಿಗೆ ದಿಢೀರನೆ ಎಚ್ಚರವಾಗಿದೆ.ಕಾಲಲ್ಲಿ ನೋಡಿದಾಗ ಕಾಳಿಂಗ ಸರ್ಪ ಸುತ್ತಿಕೊಂಡಿದೆ..!

ಹಾವನ್ನು ಕಂಡು ದಂಗಾದ ಮಹಿಳೆ ಗಟ್ಟಿ ಧೈರ್ಯ ಮಾಡಿ ಸುಮಾರು ಮೂರು ಗಂಟೆಗಳ ಕಾಲ ಅಲುಗಾಡದೇ ದೇವರ ಪ್ರಾರ್ಥನೆಯಲ್ಲಿ ತೊಡಗಿದ್ದಾಳೆ.ಅಂತೂ ಹಾವು ಆಕೆಗೆ ಯಾವ ತೊಂದರೆಯನ್ನು ಮಾಡದೆ ಹೊರಟು ಹೋದ ಘಟನೆ ಉತ್ತರಪ್ರದೇಶದ ಮಹೋಬಾದಲ್ಲಿ ನಡೆದಿದೆ.

ಉತ್ತರಪ್ರದೇಶದ ದಹ್ರಾ ಗ್ರಾಮದ ತನ್ನ ತಾಯಿಯ ಮನೆಯಲ್ಲಿದ್ದ ಮಿಥ್ಲೇಶ್‌ ಯಾದವ್‌ ಎಂಬಾಕೆಗೆ ತನ್ನ ಒಂದು ಕಾಲಿಗೆ ಏನೋ ಸುತ್ತಿಹಾಕಿಕೊಂಡಂತಿದೆ ಎಂದು ಅನುಭವಕ್ಕೆ ಬಂದಾಗ ದಿಢೀರನೆ ಎಚ್ಚರಗೊಂಡಿದ್ದರು. ಆಗ ತನ್ನ ಒಂದು ಕಾಲಿಗೆ ಕಾಳಿಂಗ ಸರ್ಪ ಸುತ್ತಿ ಹಾಕಿಕೊಂಡಿರುವುದು ಗಮನಕ್ಕೆ ಬಂದಿತ್ತು.

ಈ ಸಂದರ್ಭ ಧೈರ್ಯ ಕಳೆದುಕೊಳ್ಳದೇ ಆಕೆ ತನ್ನ ಕೈಗಳನ್ನು ಜೋಡಿಸಿ ತನಗೆ ಏನು ಹಾನಿ ಮಾಡದೇ ಹೊರಟು ಹೋಗುವಂತೆ ಪ್ರಾರ್ಥನೆಯಲ್ಲಿ ತೊಡಗಿಕೊಂಡಿದ್ದಳು ಎಂದು ವರದಿ ತಿಳಿಸಿದೆ.“ತನ್ನ ಇಬ್ಬರು ಮಕ್ಕಳ ಜೊತೆ ನಿದ್ರಿಸುತ್ತಿದ್ದೆ. ಬೆಳಗ್ಗೆ ನನಗೆ ದಿಢೀರನೆ ಎಚ್ಚರವಾದಾಗ ನನ್ನ ಒಂದು ಕಾಲಿಗೆ ಕಾಳಿಂಗ ಸರ್ಪ ಸುತ್ತಿ ಹಾಕಿಕೊಂಡಿದ್ದನ್ನು ನೋಡಿದೆ. ಆಗ ನಾನು ಕೆಲವು ಗಂಟೆಗಳ ಕಾಲ ಮಕ್ಕಳನ್ನು ದೂರ ಕರೆದೊಯ್ಯುವಂತೆ ತಾಯಿಗೆ ಹೇಳಿರುವುದಾಗಿ” ಮಿಥ್ಲೇಶ್‌ ಇಂಡಿಯಾ ಟುಡೇ ಮಾಧ್ಯಮದ ಜೊತೆ ತಿಳಿಸಿದ್ದಾರೆ.ಸದ್ಯ ಈ ಸಂಬಂಧ ವರದಿ ಭಾರಿ ವೈರಲ್ ಆಗಿದೆ.

Related posts

ಮೊಬೈಲ್‌ನಲ್ಲಿ ವಿಪರೀತ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದ 7 ವರ್ಷದ ಬಾಲಕ ; 5 ವರ್ಷದ ಬಾಲಕಿ ಮೇಲೆ ದೌರ್ಜನ್ಯ

Soldier: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಂದೂಕು ಸಿಡಿದು ಯೋಧ ಸಾವು..! ನೈಟ್ ಡ್ಯೂಟಿ ಮುಗಿಸಿ ಕ್ಯಾಂಪ್‌ನತ್ತ ತೆರಳುವ ವೇಳೆ ದುರ್ಘಟನೆ..!

ಟ್ವಿಟರ್‌ ಡೌನ್‌; ಬಳಕೆದಾರರ ಪರದಾಟ