ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ಯಾವುದೇ ತರಕಾರಿ ಸಾರನ್ನು ಹೆಚ್ಚೆಂದರೆ ಮೂರು ದಿನಗಳ ಕಾಲ ತಿನ್ನ ಬಹುದು. ಬಳಿಕ ಅದಕ್ಕೆ ಬೇರೆಯದ್ದೇ ಟೇಸ್ಟ್ ಬರುತ್ತೆ . ತಿನ್ನೋದಕ್ಕು ಹಿತವೆನಿಸೋದಿಲ್ಲ. ಆದರೆ ಇಲ್ಲೊಬ್ಬಳು ಮಹಿಳೆ ಬರೋಬ್ಬರಿ ಎರಡು ವರ್ಷಗಳ ಕಾಲ ತರಕಾರಿ ಸಾರನ್ನು ಜೋಪಾನವಾಗಿ ಪ್ರಿಡ್ಜ್ನಲ್ಲಿ ಇರಿಸಿದ್ದಾಳೆ ಅಂದ್ರೆ ನೀವು ನಂಬ್ತೀರಾ? ನಂಬಲೇ ಬೇಕು.
ಆಕೆಯ ಗಂಡ ಮಾಡಿಟ್ಟ ಕರಿಯನ್ನು ಎರಡು ವರ್ಷ ಫ್ರಿಡ್ಜ್ನಲ್ಲಿಟ್ಟಿದ್ದಾಳೆ. ಬಳಿಕ ಸೇವನೆ ಮಾಡಿದ್ದಾಳೆ. ಅಂದ ಹಾಗೆ ಈ ಘಟನೆ ನಡೆದಿದ್ದು ಜಪಾನ್ನಲ್ಲಿ . ಸದ್ಯ ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಆಕೆಯ ಪತಿ ಟೋನಿ ಅವಳಿಗಾಗಿ ಪ್ರೀತಿಯಿಂದ ವಿಶೇಷ ಅಡುಗೆಯನ್ನು ಮಾಡಿ ಕೊಟ್ಟಿದ್ದ.ಎರಡು ವರ್ಷಗಳ ಹಿಂದೆ ಕೊನೆಯದಾಗಿ ಒಂದು ಕರಿಯನ್ನು ರೆಡಿ ಮಾಡಿದ್ದ. ಅದೇ ದಿನವೇ ತೀರಕೊಂಡುಬಿಟ್ಟ. ಆತನ ನೆನಪಿಗಾಗಿ ಆ ಸಾಂಬಾರನ್ನು ಅವನ ಪತ್ನಿ ಫ್ರೀಜರ್ನಲ್ಲಿ ಹಾಗೆಯೇ ಕಾದಿಟ್ಟಿದ್ದಳಂತೆ..!
ಈಗ ಎರಡು ವರ್ಷದ ಬಳಿಕ ಗಂಡ ಮಾಡಿದ ಪ್ರೀತಿಯ ಹಾಗೂ ಕೊನೆಯ ಸಾಂಬಾರನ್ನು ಸೇವಿಸಿದ್ದಾಳೆ.ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ. ಇಂದಿಗೂ ಅವನ ಪ್ರೀತಿಯಂತೆ ಸಾರು ಕೂಡ ರುಚಿ ಕಳೆದುಕೊಂಡಿಲ್ಲ. ತನ್ನ ಘಮವನ್ನು ಕಳೆದುಕೊಂಡಿಲ್ಲ ಎಂದು ಹೇಳಿಕೊಂಡಿದ್ದಾಳೆ. ತನ್ನ ಪತಿಯನ್ನು ಕೊಂಡಾಡಿದ್ದಾಳೆ.
ಟೋನಿ ನನ್ನನ್ನು ಅಗಲುವ ದಿನ, ನಾನು ನನಗೆ ಜಪನೀಸ್ ಕರಿ ತಿನ್ನುವ ಆಸೆಯಾಗಿದೆ ಎಂದು ಹೇಳಿದ್ದೆ. ಅವನು ಅತ್ಯಂತ ಪ್ರೀತಿಯಿಂದ ನನಗಾಗಿ ತಯಾರಿಸಿ ಕೊಟ್ಟಿದ್ದ. ಅವನು ಅಗಲಿದ ನಂತರ ನಾನು ಅದನ್ನು ಸುಮ್ಮನೇ ಫ್ರೀಜರ್ನಲ್ಲಿ ಇಟ್ಟುಕೊಂಡಿದ್ದೆ. ಆದರೆ ಈಗ ಬೇರೆ ಕಡೆ ಹೋಗಬೇಕಾಗಿ ಬಂದಿರುವುದರಿಂದ ನಾನು ಕೊನೆಗೂ ಅದನ್ನು ಸೇವಿಸಬೇಕಾಯ್ತು ಎಂದು ಹೇಳಿದ್ದಾಳೆ.