ಉಡುಪಿಕರಾವಳಿ

ಉಡುಪಿ:ಬಸ್‌ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹಠಾತ್ ಎದೆನೋವು;ನಿಯಂತ್ರಣ ತಪ್ಪಿದ ಬಸ್‌,ಮುಂದೇನಾಯ್ತು?

395
Spread the love

ನ್ಯೂಸ್‌ ನಾಟೌಟ್‌ : ಬಸ್‌ ಚಲಾಯಿಸಿ ಕೊಂಡು ಹೋಗುತ್ತಿರುವಾಗಲೇ ಚಾಲಕನಿಗೆ ಹಠಾತ್ ಎದೆನೋವು ಕಾಣಿಸಿಕೊಂಡು ಬಸ್ ಹೆದ್ದಾರಿ ಪಕ್ಕದ ಇಳಿಜಾರಿಗಿಳಿದು ನಿಂತ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.

ಪಡುಬಿದ್ರೆ ಸಮೀಪದ ತೆಂಕ ಎರ್ಮಾಳಿನ ಮಸೀದಿ ಬಳಿ ಉಡುಪಿಯತ್ತ ಹೋಗುತ್ತಿದ್ದ ತಡೆರಹಿತ ಬಸ್ ನ ಚಾಲಕ ಶಂಭು ಎಂಬವರಿಗೆ ಇದ್ದಕ್ಕಿದ್ದ ಹಾಗೆ ಅನಾರೋಗ್ಯ ಕಾಣಿಸಿಕೊಂಡಿದೆ.ಈ ವೇಳೆ ನಿಯಂತ್ರಣ ತಪ್ಪಿದ್ದು ಬಸ್ ಇಲಿಜಾರಿಗಿಳಿದಿದೆ. ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಬಸ್ ಚಾಲಕ ಸೇರಿದಂತೆ ಗಾಯಗೊಂಡಿದ್ದ ಪ್ರಯಾಣಿಕರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

See also  ಕಡಬ: ಆ್ಯಂಬುಲೆನ್ಸ್‌ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..!,ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ,ತಾಯಿ -ಮಗು ಆರೋಗ್ಯ
  Ad Widget   Ad Widget   Ad Widget   Ad Widget