ಕರಾವಳಿಕೊಡಗುದಕ್ಷಿಣ ಕನ್ನಡಸುಳ್ಯ

ಸುಳ್ಯ ನಗರಕ್ಕೂ ಎಗ್ಗಿಲ್ಲದೆ ನುಗ್ಗುತ್ತಿರುವ ಕಾಡಾನೆಗಳ ಹಿಂಡು..! ಈಗ ನಗರದ ಕೃಷಿಕರಿಗೂ ಆನೆ ಕಾಟ

ನ್ಯೂಸ್ ನಾಟೌಟ್: ಕಾಡಾನೆಗಳ ದಾಳಿ ಹಳ್ಳಿ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಇದೀಗ ಕಾಡಾನೆಗಳ ಹಿಂಡು ನಗರ ಪ್ರದೇಶದ ಕೃಷಿಕರ ಜಮೀನಿನತ್ತಲೂ ಎಗ್ಗಿಲ್ಲದೆ ದಾಳಿ ಮಾಡುವುದಕ್ಕೆ ಆರಂಭಿಸಿದೆ. ಸುಳ್ಯ ನಗರದ ರಾಷ್ಟ್ರೀಯ ಹೆದ್ದಾರಿಗೆ ಕೇವಲ ಅರ್ಧ ಕಿ.ಮೀ. ದೂರದಲ್ಲಿರುವ ಕೃಷಿಕರ ಜಮೀನನ್ನು ಕಾಡಾನೆಗಳು ಹಾನಿ ಮಾಡಿರುವ ಘಟನೆ ಮೇ10ರಂದು ರಾತ್ರಿ ನಡೆದಿದೆ.

ಸುಳ್ಯ-ಆಲೆಟ್ಟಿ ರಸ್ತೆಯ ನಾಗಪಟ್ಟಣ ಸೇತುವೆ ಬಳಿ ಕಾಡಾನೆಗಳು ಬೀಡು ಬಿಟ್ಟಿದ್ದವು. ಹರೀಶ್ ಬೂಡುಪನ್ನೆ ಅವರಿಗೆ ಸೇರಿದ ತೋಟಕ್ಕೆ ಅಳವಡಿಸಿದ್ದ ಸ್ಪಿಂಕ್ಲರ್, ಅಡಿಕೆ ಗಿಡ, ಬೇಲಿಯನ್ನು ನಾಶ ಮಾಡಿದೆ. ಅಲ್ಲದೆ ಸುರೇಶ್ ಬೂಡುಪನ್ನೆ ಅವರ ತೆಂಗಿನ ಗಿಡ, ಅಡಿಕೆ ಗಿಡಗಳೂ ಹಾನಿಗೊಳಗಾಗಿವೆ. ಸ್ಥಳೀಯರಾದ ಅಹ್ಮದ್ ಹಾಗೂ ಲೋಕೇಶ್ ಕೆರೆಮೂಲೆ ಅವರ ತೋಟಗಳಿಗೂ ಕಾಡಾನೆಗಳು ನುಗ್ಗಿವೆ ಎಂದು ತಿಳಿದು ಬಂದಿದೆ.

Related posts

ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ಕೊಡಲಿಚ್ಛಿಸುವಿರಾ? ಫೆ. 4ರಿಂದ 15 ದಿನಕ್ಕೊಮ್ಮೆ ಮೈಸೂರಿನಿಂದ ರೈಲು ಸಂಚಾರ ಶುರು

ದಕ್ಷಿಣ ಕನ್ನಡ ಜಿಲ್ಲೆ ಶಾಲಾ-ಕಾಲೇಜಿಗೆ ಎರಡು ದಿನ ರಜೆ

ಗೋಳಿತೊಟ್ಟು -ಕೊಕ್ಕಡ ಹದಗೆಟ್ಟ ರಸ್ತೆ: ವರದಿ ತರಿಸಿಕೊಂಡು ಉತ್ತರಿಸುವೆ: ಎಸ್. ಅಂಗಾರ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯೆ