Uncategorized

ಕೈಹಿಡಿದ ಪತಿಯನ್ನು ಕೊಂದ ಪತ್ನಿ ಆಕೆಯ ಪ್ರಿಯಕರ ಅರೆಸ್ಟ್, ನಾಲ್ಕು ವರ್ಷದ ಮಗು ಅನಾಥ..!

ಬೆಂಗಳೂರು : ಕೈ ಹಿಡಿದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿ  ಇಬ್ಬರು ಸಿಕ್ಕಿ ಬಿದ್ದ ಘಟನೆ ಬೆಂಗಳೂರಿನ ಕೆ.ಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ನಡೆದಿದೆ. ಪತ್ನಿ ರಂಜಿತಾ ಹಾಗೂ ಅವಳ ಪ್ರಿಯಕರ ಸಂಜೀವ್  ಸುಬ್ರಮಣ್ಯ ಪೊಲೀಸರ ಅತಿಥಿಗಳಾಗಿದ್ದಾರೆ.

ಏನಿದು ಘಟನೆ? : 5 ವರ್ಷಗಳ ಹಿಂದೆ ಆಟೋ ಚಾಲಕ ಕಾರ್ತಿಕ್ ಎಂಬ ಯುವಕನನ್ನು ರಂಜಿತಾ ಪ್ರೀತಿಸಿ ಮದುವೆಯಾಗಿದ್ದಳು. ಮದುವೆಯ ಬಳಿಕ   ಕಾರ್ತಿಕ್  ಗೆಳೆಯನಾದ ಸಂಜೀವ್ ಸುಬ್ರಹ್ಮಣ್ಯನನ್ನು ತನ್ನ  ಮನೆಗೆ ಆಗಾಗ ಕರೆದುಕೊಂಡು ಬರುತ್ತಿದ್ದ ಅಲ್ಲದೆ ಮನೆಯಲ್ಲಿ ಆತನಿಗೆ ಆಶ್ರಯ ಕೂಡ ನೀಡಿದ್ದ. ಇದನ್ನೇ ದುರುಪಯೋಗ ಪಡಿಸಿಕೊಂಡ ಸಂಜೀವ್ ತನ್ನ ಗೆಳೆಯ ಕಾರ್ತಿಕ್ ನ ಪತ್ನಿ ರಂಜಿತಳನ್ನು ಪ್ರೀತಿಸತೊಡಗಿದ. ಇವರಿಬ್ಬರ ಪರಿಚಯ ಗೆಳೆತನವಾಗಿ ಗೆಳೆತನ ಪ್ರೀತಿಗೆ ತಿರುಗಿತ್ತು. ಕಾರ್ತಿಕ ಇಲ್ಲದ ಸಮಯದಲ್ಲಿ ಇಬ್ಬರು ಮಂಚವೇರುತ್ತಿದ್ದರು. ಅಲ್ಲದೆ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು.ಮುಂದೆ  ಸಮಸ್ಯೆಯಾಗಬಹುದೆಂದು ನಿರ್ಧಾರಕ್ಕೆ ಬಂದರು. ಸಂಬಂಧಗಳಿಗೆ ಸಮಸ್ಯೆಯಾಗುತ್ತದೆ ಎಂದು ಅರಿತುಕೊಂಡ ಪ್ರೇಮಿಗಳು ಹೇಗಾದರೂ ಮಾಡಿ ಕಾರ್ತಿಕ್‌ನನ್ನು ಮುಗಿಸಬೇಕೆಂದು ಸ್ಕೇಚ್ ಹಾಕಿದರು. ಒಂದು ದಿನ ಕಾರ್ತಿಕನನ್ನು  ಚನ್ನಪಟ್ಟಣದ ಕಡೆಗೆ ಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸಿದರು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ  ಮೃತದೇಹವನ್ನು ನದಿಯೊಂದಕ್ಕೆ ಎಸೆದು  ಆರೋಪಿಗಳು  ಕಾಲ್ಕಿತ್ತಿದ್ದರು. ಬಳಿಕ  ಪತ್ನಿ ರಂಜಿತಾ ತನ್ನ ಗಂಡ ನಾಪತ್ತೆಯಾಗಿರುವುದಾಗಿ  ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ತನಿಖೆ ಶುರು ಮಾಡಿ ಕೊನೆಗೆ ರಂಜಿತಾಳ ಮೇಲೆ ಅನುಮಾನ ಬಂದು ವಿಚಾರ ನಡೆಸಿದಾಗ ಸತ್ಯಾಂಶ ಗೊತ್ತಾಗಿದೆ. ತಕ್ಷಣ ರಂಜಿತಾ ಮತ್ತು ಸಂಜೀವ್ ಸುಬ್ರಹ್ಮಣ್ಯ ನನ್ನುವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದರು.ಸದ್ಯ ಪ್ರೇಮಿಗಳು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದರೆ ಇಲ್ಲಿ ನಾಲ್ಕು ವರ್ಷದ ಮಗು ತಬ್ಬಲಿಯಾಗಿದೆ.

Related posts

ನಾಪತ್ತೆಯಾಗಿದ್ದ ಬಾಲಕ ಉಡುಪಿ ಬಸ್ ನಿಲ್ದಾಣದಲ್ಲಿ ಪತ್ತೆ..! ಪ್ರಯಾಣಿಕರ ಬಳಿ ಹಣ ಬೇಡಿ ಬೇರೆ ಊರಿಗೆ ಪಲಾಯನಗೈಯಲು ಪ್ಲಾನ್ ಮಾಡಿದ್ದ 3ನೇ ತರಗತಿ ವಿದ್ಯಾರ್ಥಿ..!

ಯಾವಾಗಲೂ ನಿಮಗೆ ಹಲಸಿನ ಹಣ್ಣು ತಿನ್ನಬೇಕಾ? ಹಾಗಾದ್ರೆ ಸರ್ವ ಋತು ಹಲಸಿನ ಗಿಡ ನೆಡಿ

ಶಿರಾಡಿ ಘಾಟ್: ಕಾರು ಮತ್ತು ಕಂಟೈನರ್ ನಡುವೆ ಢಿಕ್ಕಿ..! ಓರ್ವ ಸಾವು..!