ಕರಾವಳಿ

ಜೆಸಿಬಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಟೆಲಿಫೋನ್ ಕೇಬಲ್ ಸಂಗ್ರಹಿಸುತ್ತಿದ್ದರು,ಬೈಕ್ ನಲ್ಲಿ ಸಾಗಾಟ ಮಾಡುವಾಗ ಸಿಕ್ಕಿಬಿದ್ದರು

ನ್ಯೂಸ್ ನಾಟೌಟ್ : ಟೆಲಿಫೋನ್ ಕೇಬಲ್ ನ್ನು ಕದ್ದು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡ ಘಟನೆ ಪಂಜದ ಕರಿಕ್ಕಳದಲ್ಲಿ ನಡೆದಿದೆ.ಇವರಿಬ್ಬರು ಬೈಕ್ ನಲ್ಲಿ ಸಾಗಾಟ ಮಾಡುತ್ತಿದ್ದಾಗ ಪಂಜದ ಕೃಷ್ಣ ನಗರದಲ್ಲಿ ಸಿಕ್ಕಿಬಿದ್ದಿದ್ದಾರೆ.

ರಸ್ತೆ ಬದಿಯಲ್ಲಿ ನೀರು ಸರಬರಾಜು ಯೋಜನೆಗೆ ಜೆಸಿಬಿಯಲ್ಲಿ ಹೊಂಡಗಳನ್ನು ತೆಗೆಯವ ಕೆಲಸ ಮಾಡುತ್ತಿದ್ದರು.ಈ ವೇಳೆ ಅವರಿಗೆ ಟೆಲಿಫೋನ್ ಕೇಬಲ್ ಸಿಕ್ಕಿದೆ.ಇದನ್ನೆಲ್ಲಾ ಸಂಗ್ರಹಿಸಿ ಬೈಕ್ ನಲ್ಲಿ ತೆಗೆದುಕೊಂಡು ಹೋಗಲು ರೆಡಿಯಾಗಿದ್ದರು ಎನ್ನಲಾಗಿದೆ.ಕೂಡಲೇ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು (ದರ್ಶನ್ ಹಾಗೂ ನಾಗರಾಜ್), ಟೆಲಿಫೋನ್ ಕೇಬಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಈ ಬಗ್ಗೆ ತನಿಖೆ ಮುಂದುವರಿದಿದೆ.

Related posts

ಸುಳ್ಯ: ಶಾಂತಿನಗರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಓದುವ ದಿನಾಚರಣೆ

ಕಾರ್ಕಳ: ಕಾಂಗ್ರೆಸ್‌ನಿಂದ ಮೇ1ರಂದು ಅದ್ದೂರಿ ರೋಡ್ ಶೋ, ಬೃಹತ್ ಸಮಾವೇಶ;ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ

ಸುಳ್ಯ: ಹಳೆಗೇಟಿನ ರಸ್ತೆಯೊಂದರಲ್ಲಿ ಹೆಬ್ಬಾವು ಪ್ರತ್ಯಕ್ಷ..! ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವವರಿಗೆ ಆತಂಕ