ಕರಾವಳಿಕ್ರೈಂ

ಪುತ್ತೂರು: ಅಪಘಾತದಿಂದ ಪುತ್ರ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ತಾಯಿ ನೇಣಿಗೆ ಶರಣು..!

ನ್ಯೂಸ್‌ ನಾಟೌಟ್‌: ಅಪಘಾತದಲ್ಲಿ ಗಾಯಗೊಂಡು ಪುತ್ರ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ತಾಯಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಪುರುಷರಕಟ್ಟೆ ಇಂದಿರಾನಗರದಲ್ಲಿ ಸಂಭವಿಸಿದೆ.

ಮೃತ ಮಹಿಳೆಯನ್ನು ಇಂದಿರಾನಗರದ ದಿ. ಪ್ರವೀಣ್‌ ಅವರ ಪತ್ನಿ ಕಾವ್ಯಾ (38) ಎಂದು ಗುರುತಿಸಲಾಗಿದೆ. ಪ್ರವೀಣ್‌ ಕೂಡ 7 ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅದೇ ಸ್ಥಳದಲ್ಲಿ ಕಾವ್ಯಾ ಕೂಡ ಸಾವಿಗೀಡಾಗಿದ್ದಾರೆ.

ಪುತ್ರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ : ಜೂ.30ರಂದು ಬೆದ್ರಾಳ ಸಮೀಪ ಸಂಭವಿಸಿದ ಅಪಘಾತವೊಂದರಲ್ಲಿ ಕಾವ್ಯ ಅವರ ಪುತ್ರ ಪ್ರತೀಕ್‌ ತೀವ್ರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Related posts

‘ಕೋವಿಡ್ ವೇಳೆ ಆಮ್ಲಜನಕ ದುರಂತ ಸೇರಿದಂತೆ ಬಿಜೆಪಿಯ ಎಲ್ಲಾ ಹಗರಣಗಳ ಮರು ತನಿಖೆ ಆಗೋದು ನಿಶ್ಚಿತ’, ಸರಣಿ ಟ್ವೀಟ್ ಮೂಲಕ CM ಸಿದ್ದರಾಮಯ್ಯ ಗರ್ಜನೆ

ಅರಂಬೂರು: ಅಂಗಡಿಯೊಳಗೆ ನುಗ್ಗಿದ ಬೊಲೆರೊ ಜೀಪ್, ಚಾಲಕನ ನಿಯಂತ್ರಣ ತಪ್ಪಿ ಅವಘಡ

ಹಾಡ ಹಗಲೇ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದ ಪ್ರಿಯಕರ..!