Uncategorized

ಜಾಲಿ ಟ್ರಿಪ್‌ನಲ್ಲಿದ್ದ ಮುಸ್ಲಿಂ ಯುವಕ ಹಾಗೂ ಹಿಂದು ಯುವತಿಯರ ದಾರುಣ ಸಾವು!

ನ್ಯೂಸ್ ನಾಟೌಟ್: ಜಾಲಿ ಟ್ರಿಪ್‌ಗೆಂದು ಶ್ರೀನಿವಾಸ ಸಾಗರ ಜಲಾಶಯಕ್ಕೆ ತೆರಳಿದ್ದ ಮೂರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಗಳನ್ನು ಪೂಜಾ(21) ರಾಧಿಕಾ(21) ಇಮ್ರಾನ್ (21) ಎಂದು ಗುರುತಿಸಲಾಗಿದೆ.

ಏನಿದು ಘಟನೆ?

ಮೃತರು ಬೆಂಗಳೂರಿನಲ್ಲೇ ಡಿ ಫಾರ್ಮಸಿ ಓದುತ್ತಿದ್ದ ವಿದ್ಯಾರ್ಥಿಗಳು ಎನ್ನಲಾಗಿದೆ.ಆರು ವಿದ್ಯಾರ್ಥಿಗಳು ಬೆಂಗಳೂರಿನಿಂದ ಶ್ರೀನಿವಾಸ ಸಾಗರ ಜಲಾಶಯಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ನೀರಿನಲ್ಲಿ ಇಳಿದು ಫೋಟೋಶೂಟ್​ ಮಾಡಬೇಕೆಂದು ನಾಲ್ವರು ನೀರಿಗೆ ಇಳಿದಿದ್ದರು. ಓರ್ವ ವಿದ್ಯಾರ್ಥಿನಿ ಮಾತ್ರ ಜಲಾಶಯದ ಮೇಲೆ ಇದ್ದಳು ಎನ್ನಲಾಗಿದೆ. ಈ ವೇಳೆ ನೀರಿನಲ್ಲಿದ್ದ ವಿದ್ಯಾರ್ಥಿಗಳು ಆಯತಪ್ಪಿ ಮುಳುಗಿದ್ದಾರೆ. ಸ್ಥಳೀಯರ ಸಹಾಯದಿಂದ ವಿಕಾಸ್​ ಮತ್ತು ಚನ್ನಾರಾಮ್​ರನ್ನು ಜೀವಂತವಾಗಿ ನೀರಿನಿಂದ ಹೊರಕ್ಕೆ ತರಲಾಗಿದೆ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಸ್ಥಳೀಯ ಮೀನುಗಾರರ ಸಹಾಯದಿಂದ ವಿದ್ಯಾರ್ಥಿಗಳ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಜಲಾಶಯದ ಸಮೀಪಕ್ಕೆ ಮೃತ ವಿದ್ಯಾರ್ಥಿಗಳ ಕುಟುಂಬಸ್ಥರು ಆಗಮಿಸಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

Related posts

ಮಂಗಳೂರು: ನಕಲಿ ದಾಖಲೆ ನೀಡಿ ಪಾಸ್‌ಪೋರ್ಟ್ ಪಡೆದ ಬಾಂಗ್ಲಾ ಪ್ರಜೆ..! ಪಶ್ಚಿಮ ಬಂಗಾಳದ ಮೂಲಕ ಭಾರತ ಪ್ರವೇಶಿಸಿ ಉಡುಪಿಗೆ ಬಂದಿದ್ದ ಆರೋಪಿ..!

ನಾಳೆ ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ನಿಂದ ತಡೆ! 3 ವಾರಗಳ ಕಾಲ ನಿರ್ಬಂಧ!

ವಿರಾಟ್‌ ಹಿಂದೂ ಸಮಾವೇಶಕ್ಕೆಸಿದ್ಧತೆ ನಡೆಸುತ್ತಿದ್ದಾಗಲೇ ಶ್ರೀರಾಮಸೇನೆ ಮುಖಂಡರ ಮೇಲೆ ಗುಂಡಿನ ದಾಳಿ