ಕ್ರೈಂದೇಶ-ಪ್ರಪಂಚದೇಶ-ವಿದೇಶ

ನಿರಾಶ್ರಿತರ ಡೇರೆಗಳ ಮೇಲೆ ಇಸ್ರೇಲ್ ನಿಂದ ಭೀಕರ ವಾಯುದಾಳಿ, 35 ಮಂದಿ ಸ್ಥಳದಲ್ಲೇ ಸಾವು..! ಈ ಬಗ್ಗೆ ಇಸ್ರೇಲ್ ಹೇಳಿದ್ದೇನು..?

ನ್ಯೂಸ್ ನಾಟೌಟ್: ಗಾಜಾದ ದಕ್ಷಿಣ ಭಾಗದ ರಫಾ ನಗರದಲ್ಲಿರುವ ನಿರಾಶ್ರಿತರ ಡೇರೆಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಕನಿಷ್ಠ 35 ಮಂದಿ ಸಾವಿಗೀಡಾಗಿದ್ದಾರೆ ಎಂದು ಪ್ಯಾಲೆಸ್ಟೀನ್‌ ಆರೋಗ್ಯ ಕಾರ್ಯಕರ್ತರು ತಿಳಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರು ಹಾಗೂ ಮಕ್ಕಳು ಎನ್ನಲಾಗಿದೆ.

ಹೊತ್ತಿ ಉರಿಯುತ್ತಿರುವ ಅವಶೇಷಗಳ ನಡುವೆ ಹಲವರು ಸಿಲುಕಿಕೊಂಡಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ರಫಾದಲ್ಲಿ ಸೇನೆಯ ಆಕ್ರಮಣವನ್ನು ನಿಲ್ಲಿಸಬೇಕು ಎಂದು ಅಂತರಾಷ್ಟ್ರೀಯ ನ್ಯಾಯಾಲಯ ಇಸ್ರೇಲ್‌ಗೆ ಆದೇಶಿಸಿದ ಎರಡೇ ದಿನದಲ್ಲಿ ಈ ದಾಳಿ ನಡೆದಿದೆ. ಇಸ್ರೇಲ್ ಆಕ್ರಮಣದಿಂದಾಗಿ ಗಾಜಾದ ಅರ್ಧಕ್ಕೂ ಹೆಚ್ಚು ಜನಸಂಖ್ಯೆ ರಫಾದಲ್ಲಿ ಆಶ್ರಯ ಪಡೆದಿದ್ದಾರೆ. ಲಕ್ಷಾಂತರ ಮಂದಿ ಇಲ್ಲಿ ಡೇರೆಯಲ್ಲಿ ವಾಸವಿದ್ದಾರೆ ಎನ್ನಲಾಗಿದೆ. ದಾಳಿ ನಡೆಸಿದ್ದನ್ನು ಇಸ್ರೇಲ್ ಸೇನೆ ಖಚಿತಪಡಿಸಿದ್ದು. ಹಮಾಸ್ ಬಂಡುಕೋರರ ನೆಲೆಯ ಮೇಲೆ ದಾಳಿ ಮಾಡಲಾಗಿದೆ ನಿರಾಶ್ರಿತರ ಮೇಲಲ್ಲ ಎಂದಿದೆ. ಹಮಾಸ್‌ನ ಇಬ್ಬರು ಹಿರಿಯ ಬಂಡುಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

Click 👇

https://newsnotout.com/2024/05/kannada-news-festival-of-ajja-in-uttara-kannada
https://newsnotout.com/2024/05/rajkot-fire-incident-and-couple-nomore
https://newsnotout.com/2024/05/fans-of-darshan-and-arjuna-memory

Related posts

ರಂಭಾಪುರಿ ಶ್ರೀ ಕಾರಿನ ಮೇಲೆ ಚಪ್ಪಲಿ ಎಸೆದ ಮಹಿಳೆ..! ಏನಿದು ಭಕ್ತರು ಹಾಗೂ ಸ್ವಾಮೀಜಿ ನಡುವಿನ ವಿವಾದ..?

85 ಸಾವಿರದ ಬೈಕ್‌ಗೆ ಬರೋಬ್ಬರಿ 70 ಸಾವಿರ ರೂ. ದಂಡ ಕಟ್ಟಿದ ಸವಾರ..! ಏನಿದು ಇಷ್ಟೊಂದು ಟ್ರಾಫಿಕ್ ನಿಯಮ ಉಲ್ಲಂಘನೆ?

ವಯನಾಡ್ ಭೂಕುಸಿತ: ಮೃತರ ಸಂಖ್ಯೆ 36ಕ್ಕೆ ಏರಿಕೆ..! ಸಿಎಂ ಪಿಣರಾಯಿ ಜತೆ ಮಾತನಾಡಿ ಅಗತ್ಯ ನೆರವಿನ ಭರವಸೆ ನೀಡಿದ ಮೋದಿ