ದೇಶ-ಪ್ರಪಂಚ

ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ 2ನೇ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು!

ನ್ಯೂಸ್ ನಾಟೌಟ್ : ಅಸ್ಸಾಂಗೆ ಮೂರು ದಿನಗಳ ಪ್ರವಾಸದ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.

ದ್ರೌಪದಿ ಮುರ್ಮು ಏ.6ರಂದು ಅಸ್ಸಾಂಗೆ ಬಂದಿದ್ದು, ಶುಕ್ರವಾರ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಗಜ ಉತ್ಸವ-2023 ಅನ್ನು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಮುರ್ಮು ಅವರು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಎರಡನೇ ಭಾರತೀಯ ರಾಷ್ಟ್ರಪತಿಯಾಗಿದ್ದು, 2009 ರಲ್ಲಿ ಮಾಜಿ ರಾಷ್ಟ್ರಪತಿ ಪ್ರತಿಭಾ `ಪಾಟೀಲ್ ಅವರು ಸುಖೋಯ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಸುಖೋಯ್ 30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಅಸ್ಸಾಂನ ತೇಜ್ ಪುರ ವಾಯುಪಡೆ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯುದ್ಧ ವಿಮಾನದಲ್ಲಿ ಕುಳಿತು ವಾಯುಯಾನ ನಡೆಸಿದ್ದಾರೆ.

Related posts

ಪೋಷಕರೇ ನಿಮ್ಮ ಮಕ್ಕಳ ಮೇಲೆ ನಿಗಾ ಇರಲಿ..ಮಕ್ಕಳಲ್ಲಿ ಹೆಚ್ಚುತ್ತಿದೆ ಬೊಜ್ಜು ಪ್ರೇರಿತ ಅಸ್ತಮಾ..ಹಾಗಂದ್ರೇನು?ಇಲ್ಲಿದೆ ಡಿಟೇಲ್ಸ್..

ಮೊಬೈಲ್‌ನ್ನು ಚಾರ್ಜ್‌ಗಿಟ್ಟು ಗೇಮ್ ಆಡುತ್ತಿದ್ದ ವೇಳೆ ಏಕಾಏಕಿ ಮೊಬೈಲ್ ಬ್ಲಾಸ್ಟ್..!

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪತಿ ನಿಧನ ! ಗಣ್ಯರಿಂದ ಸಂತಾಪ