ದೇಶ-ವಿದೇಶರಾಜಕೀಯ

ವೋಟ್ ಮಾಡಿ ಭಾವುಕರಾದ ಮೋದಿಯ ಸಹೋದರ, ಮತಗಟ್ಟೆಯ ಹೊರಗೆ ಸಹೋದರನನ್ನು ಭೇಟಿಯಾದ ಪ್ರಧಾನಿ

ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿಯವರ ಹಿರಿಯ ಸಹೋದರ ಸೋಮಾಭಾಯಿ ಮೋದಿ ಮತದಾನದ ಬಳಿಕ ತಮ್ಮ ತಾಯಿ ದಿವಂಗತ ಹೀರಾಬೆನ್ ರನ್ನು ಸ್ಮರಿಸಿ ಭಾವುಕರಾದರು. ಈ ವೇಳೆ, ನನ್ನ ತಾಯಿ ಈಗ ಇಲ್ಲ, ಆದರೆ ಅವರು ನರೇಂದ್ರಭಾಯಿ ಅವರಿಗೆ ಸ್ವರ್ಗದಿಂದಲೇ ಆಶೀರ್ವಾದ ಮಾಡುತ್ತಿರಬಹುದು ಎಂದರು.

ಸೋಮಾಭಾಯಿ ಮೋದಿ ರಾನಿಪ್‍ ನ ಮತಗಟ್ಟೆಯ ಹೊರಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಇಬ್ಬರೂ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡರು. ಬಳಿಕ ಸೋಮಾಭಾಯಿಯವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, ತಮ್ಮ ತಾಯಿಯನ್ನು ನೆನೆದು ಭಾವುಕರಾದರು. ಮೋದಿಯವರು ಹಿಂದೆ ಮತದಾನಕ್ಕೂ ಮುನ್ನ ಗುಜರಾತ್‍ ನ ಗಾಂಧಿನಗರದಲ್ಲಿರುವ ನಿವಾಸದಲ್ಲಿ ತಮ್ಮ ತಾಯಿಯನ್ನು ಭೇಟಿಯಾಗುತ್ತಿದ್ದರು. ತಾಯಿಯವರ ಆಶೀರ್ವಾದ ಪಡೆದು ಮತ ಚಲಾಯಿಸುತ್ತಿದ್ದರು. ದೇಶದ ಜನ ನನ್ನ ಸಹೋದರ ಮೂರನೇ ಬಾರಿಗೆ ಪ್ರಧಾನಿಯಾಗಬೇಕು ಎಂದು ಬಯಸುತ್ತಾರೆ. ಅವರಂತೆ ನಾನು ಸಹ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಬಯಸುತ್ತೇನೆ ಎಂದರು.

Related posts

ದಿನಕ್ಕೆ 14 ಗಂಟೆ ಕೆಲಸ ನೀತಿ ವಿರೋಧಿಸಿ ತಡರಾತ್ರಿ ಪ್ರತಿಭಟನೆ..! ಸರ್ಕಾರದ ಮೇಲೆ ಉದ್ಯಮಿಗಳ ಒತ್ತಡ..?

ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಜೆಡಿಎಸ್‌ಗೆ ಸೇರ್ಪಡೆ

ಕೇಕ್ ತಿಂದು 5 ವರ್ಷದ ಮಗು ಸಾವು..! ತಂದೆ-ತಾಯಿಯ ಸ್ಥಿತಿಯೂ ಗಂಭೀರ..! ಆರ್ಡರ್ ಕ್ಯಾನ್ಸಲ್ ಆದದ್ದೇ ಡೆಲಿವರಿ ಬಾಯ್ ಗೆ ಮುಳುವಾಯ್ತಾ..?