ಕ್ರೈಂಬೆಂಗಳೂರುರಾಜಕೀಯ

ಮತಗಟ್ಟೆ ಸಮೀಪವೇ ನೆಲಕ್ಕುರುಳಿದ ಬೃಹತ್ ಮರ..! ಆಗಷ್ಟೇ ಅಲ್ಲಿಂದ ಹಾದು ಹೋಗಿದ್ದ ಮತದಾರರು..!

ನ್ಯೂಸ್ ನಾಟೌಟ್: ನೋಡ ನೋಡುತ್ತಲೇ ಬೃಹತ್ ಮರವೊಂದು ನೆಲಕ್ಕುರುಳಿದೆ. ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ 38ನೇ ಮತಗಟ್ಟೆ ಸಮೀಪದಲ್ಲೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ‘ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಇದೇ ವೇಳೆ ಮತಗಟ್ಟೆ ಸಮೀಪ ಬೃಹತ್ ಮರವೊಂದು ಬುಡ ಸಮೇತ ಕಿತ್ತು ಬಂದಿದ್ದು, ಭಾರೀ ಅನಾಹುತವೊಂದು ತಪ್ಪಿದೆ.

ಆಗಷ್ಟೇ ಮತದಾನ ಮಾಡಲು ಮತದಾರರು ಆ ರಸ್ತೆ ಮೂಲಕ ಹಾದು ಹೋಗಿದ್ದರು. ಅದೃಷ್ಟವಶಾತ್‌ ಮರ ಬೀಳುವಾಗ ಆ ಸಂದರ್ಭದಲ್ಲಿ ಜನರ ಓಡಾಟ ಇರಲಿಲ್ಲ. ಹೀಗಾಗಿ ದೊಡ್ಡ ದುರಂತವೊಂದು ತಪ್ಪಿದೆ. ಮರದ ಪಕ್ಕದಲ್ಲೇ ಇದ್ದ ಮಾರುತಿ ಕಾರ್ ಬೋನೆಟ್‌ ಮೇಲೆ ಮರ ಬಿದ್ದಿದೆ. ಹೀಗಾಗಿ ಕಾರಿನ ಮುಂಭಾಗದ ಲೈಟ್‌ ಜಖಂ ಗೊಂಡಿದೆ. ರಸ್ತೆಗೆ ಅಡ್ಡಲಾಗಿ ಬೃಹತ್‌ ಮರ ಬಿದ್ದಿದ್ದು, ವಾಹನ ಸವಾರರ ಸಂಚಾರಕ್ಕೆ ಅಡ್ಡಿಯಾಗಿತ್ತು. ಇಂದಿರಾನಗರದ ಅಪ್ಪಾರೆಡ್ಡಿ ಪಾಳ್ಯದಲ್ಲಿರುವ ಮತಗಟ್ಟೆಯ ಕೂದಲಳತೆ ದೂರದಲ್ಲಿ ಘಟನೆ ನಡೆದಿದೆ.

Related posts

ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಪ್ರಕರಣ ಮುಚ್ಚಿ ಹಾಕಲು ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ ಪಾಪಿ..! ಕಾಮುಕನಿಂದ ಬಾಲಕಿ ಬಚವಾಗಿದ್ದೇಗೆ..?

ತಮಿಳುನಾಡು: 17 ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಿ ಲೈಂಗಿಕವಾಗಿ ಬಳಸಿಕೊಂಡ ಮಹಿಳೆ..! ಆಕೆಯನ್ನು ಹಿಡಿದ ಪೊಲೀಸರ ಕಾರ್ಯಚರಣೆ ಹೇಗಿತ್ತು..?

ಗೋ ಹತ್ಯೆ ಮಾಡಿದ್ರೆ ಸರ್ಕಲ್‌ ನಲ್ಲಿ ನಿಲ್ಲಿಸಿ ಗುಂಡು ಹಾರಿಸಬೇಕಾಗುತ್ತದೆ ಎಂದ ಕಾಂಗ್ರೆಸ್ ಸಚಿವ..! ಮಂಕಾಳ ವೈದ್ಯ ಖಡಕ್ ಎಚ್ಚರಿಕೆ..!