ಕರಾವಳಿ

ಉಬರಡ್ಕ ಮಿತ್ತೂರಿನಲ್ಲೂ ಮತದಾನ ಬಹಿಷ್ಕಾರದ ಬ್ಯಾನರ್ !

ನ್ಯೂಸ್ ನಾಟೌಟ್: ಸುಳ್ಯದ ಕೆಲವು ಭಾಗಗಳಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಜೋರಾಗಿ ಸದ್ದು ಮಾಡುತ್ತಿರುವ ವೇಳೆಯಲ್ಲಿ, ಇದೀಗ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಬೆತ್ತಿಬನ ಎಂಬಲ್ಲಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದೆ ಎಂದು ಮಾರ್ಚ್ 17 ರಂದು ವರದಿ ತಿಳಿಸಿದೆ.

ಗುದ್ದಲಿ ಪೂಜೆ ನಡೆದು ಎರಡು ತಿಂಗಳು ಕಳೆದರೂ ರಸ್ತೆ ಕಾಮಗಾರಿ ಆರಂಭಗೊಳ್ಳದ ಕಾರಣ ಟೊಳ್ಳು ಭರವಸೆಯನ್ನು ನೀಡುತ್ತಾ ಬಂದಿರುವ ಉಬರಡ್ಕ ಗ್ರಾಮ ಪಂಚಾಯತ್ ಗೆ ಕುಂಬೆತ್ತಿಬನ ನಾಗರಿಕರಿಂದ ಮತದಾನ ಬಹಿಷ್ಕಾರ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.

ಕೆಲವು ತಿಂಗಳು ಕಳೆದರೂ ಕೇವಲ ಭರವಸೆಗಳನ್ನು ಹೊರತುಪಡಿಸಿ ಯಾವುದೇ ರೀತಿಯ ಅಭಿವೃದ್ದಿ ಕಾರ್ಯಗಳು ಆಗಿಲ್ಲ, ಜೊತೆಗೆ ಜನ ಪ್ರತಿನಿಧಿಗಳು ಜನರ ಕುಂದು ಕೊರತೆಗಳನ್ನು ಆಲಿಸುತ್ತಿಲ್ಲ, ಕೇವಲ ಮತದಾನದ ಸಂದರ್ಭದಲ್ಲಿ ಮಾತ್ರ ಜನರ ಸಂಕಷ್ಟಗಳನ್ನು ಕೇಳಿದಂತೆ ನಟಿಸುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Related posts

ನಾಳೆಯಿಂದ ಸರ್ಕಾರಿ ನೌಕರರ ಮುಷ್ಕರ ! ಯಾವೆಲ್ಲ ಸೇವೆಗಳು ಸ್ಥಗಿತ ? ಇಲ್ಲಿವೆ ಸಂಪೂರ್ಣ ಮಾಹಿತಿ

ಮಗನಿಗಾಗಿ ಶಸ್ತ್ರ ತ್ಯಾಗ ಮಾಡಿದ ಮಾಜಿ ಸಿಎಂ

ಸಂಪಾಜೆ: ಕಲಾ, ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿಗಳ ಕಮಾಲ್..! ಶಿಕ್ಷಕರ ನಿರೀಕ್ಷೆ ಮೀರಿ ಸಾಧನೆ ಮೆರೆದ ವಿದ್ಯಾರ್ಥಿಗಳು