ಕರಾವಳಿ

ಹುಡುಗ ಎಂದು ಮಂಗಳಮುಖಿ ಜತೆ ಯುವತಿಯ ಚಾಟಿಂಗ್‌

ನ್ಯೂಸ್ ನಾಟೌಟ್‌: ಇತ್ತೀಚಿನ ದಿನಗಳಲ್ಲಿ ಈ ಸಾಮಾಜಿಕ ಜಾಲತಾಣಗಳನ್ನು ಕೆಲವರು ಇನ್ನೊಬ್ಬರಿಗೆ ಮೋಸ ಮಾಡುವುದಕ್ಕಾಗಿಯೇ ಉಪಯೋಗಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಇದೀಗ ಮಂಗಳಮುಖಿಯೊಬ್ಬಳು ತಾನು ಹುಡುಗ ಎಂದು ಹೇಳಿಕೊಂಡು ವಿಟ್ಲದ ಯುವತಿಯೊಬ್ಬಳಿಗೆ ಯಾಮಾರಿಸಿ ಚಾಟಿಂಗ್ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬಂಟ್ವಾಳ ತಾಲೂಕಿನ ವಿಟ್ಲದ ಪಡ್ನೂರು ಗ್ರಾಮದ ಯುವತಿಗೆ ಫೇಸ್ ಬುಕ್ ಮೂಲಕ ನಾಲ್ಕು ವರ್ಷಗಳ ಹಿಂದೆ ಪ್ರದೀಪ್ ಎಂಬ ಯುವಕನ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹದಿಂದ ಪ್ರೇಮಕ್ಕೆ ಜಾರಿತು. ಇಬ್ಬರು ಗಾಢವಾಗಿ ಪ್ರೀತಿಸುವುದಕ್ಕೆ ಶುರು ಮಾಡಿದರು. ಈ ವಿಚಾರ ಮನೆಯಲ್ಲಿ ಗೊತ್ತಾಗಿ ಹುಡುಗಿಯ ತಾಯಿ ಶೈಲಜಾ ಅನ್ನುವವರು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ  ನಡೆಸಲಾಗಿ ಪೊಲೀಸರಿಗೆ ಅಚ್ಚರಿ ಕಾದಿತ್ತು. ಯಾಕೆಂದರೆ ಅವನು ಅವನ್ನಲ್ಲ ಅವಳು ಅನ್ನುವುದು ಗೊತ್ತಾಗಿ ಎಲ್ಲರೂ ಒಂದು ಕ್ಷಣ ಗಾಬರಿಗೊಳಗಾಗಿದ್ದರು. ಗಂಡಸಿನ ಧ್ವನಿಯಲ್ಲಿರುವುದು ಜ್ಯೋತಿ ಎಂಬ ಮಂಗಳಮುಖಿ ಎಂಬ ಅಚ್ಚರಿ ಅಂಶ ಬೆಳಕಿಗೆ ಬಂದಿದೆ. ಪ್ರೀತಿಯ ನಶೆಯಲ್ಲಿದ್ದ ಹುಡುಗಿ ಈಗ ನಶೆ ಇಳಿಸಿಕೊಂಡು ತೆಪ್ಪಗಾಗಿದ್ದಾಳೆ.

Related posts

ಆಂಬ್ಯುಲೆನ್ಸ್ -ರಿಕ್ಷಾ ನಡುವೆ ಅಪಘಾತ ನಾಲ್ವರಿಗೆ ಗಂಭೀರ ಗಾಯ

ಅರಂತೋಡು: ಬಿಜೆಪಿ ಭದ್ರಕೋಟೆಯೊಳಗಿರುವ ಈ ಊರಿನ ಜನರಿಗೆ 20 ವರ್ಷದಿಂದ ‘ಮಡ್ ರೋಡ್’ ಭಾಗ್ಯ..! ರೊಚ್ಚಿಗೆದ್ದ ಜನರಿಂದಲೇ ಈಗ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ

ನಾಳೆ ಸಂಪಾಜೆ ಗ್ರಾಮ ಪಂಚಾಯತ್‌ಗೆ ಡಾ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ